
ಕೊಪ್ಪಳ, 18 ಮೇ (ಹಿ.ಸ.) :
ಆ್ಯಂಕರ್ : ಮಳೆಗಾಲದ ಮುಂಜಾಗ್ರತೆ ಕುರಿತು ಕೊಪ್ಪಳ ನಗರಸಭೆಯಿಂದ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಮಳೆಗಾಲದ ಮುಂಜಾಗ್ರತೆ ಕ್ರಮವಾಗಿ ಕೊಪ್ಪಳ ನಗರಸಭೆಯು ಮಳೆಯಿಂದ ಆಗುವ ಹಾನಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜಕಾಲುವೆ ಹಾಗೂ ಚರಂಡಿಗಳು ಮತ್ತು ವಿವಿಧ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ಹೂಳು ತೆಗೆಯುವ ಕಾರ್ಯವನ್ನು ಮೇ 16 ರಿಂದ ಪ್ರಾರಂಭಿಸಲಾಗಿರುತ್ತದೆ.
ಮುಂದುವರೆದು ಮಳೆಯಿಂದ ಸಾರ್ವಜನಿಕರಿಗೆ ಉಂಟಾಗುವ ಸಮಸ್ಯೆಗಳು, ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯು ಪೂರ್ವಸಿದ್ದತೆಯನ್ನು ಮಾಡಿಕೊಂಡಿದ್ದು, ಪ್ರಯುಕ್ತ ವಾರ್ಡಿನ ನಿಕಟಪೂರ್ವ ಅಧ್ಯಕ್ಷರು, ಉಪಧ್ಯಾಕ್ಷರು, ಸದಸ್ಯರು ಹಾಗೂ ನಗರದ ಸಾರ್ವಜನಿಕರು, ವಿವಿಧ ಸಂಘ, ಸಂಸ್ಥೆಗಳು, ಮಳೆಗಾಲದ ಸಮಯದಲ್ಲಿ ತಮ್ಮ ವಾರ್ಡುಗಳಲ್ಲಿ ಆಗುವ ಸಮಸ್ಯೆಗಳ ಕುರಿತು ನೇರವಾಗಿ ನಗರಸಭೆಗೆ ಸಂಪರ್ಕಿಸಲು ಲಿಖಿತ ದೂರುಗಳನ್ನು ದಾಖಲಿಸಿ ಸ್ವೀಕೃತಿಯನ್ನು ಪಡೆಯಬಹುದಾಗಿರತ್ತದೆ.
ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಈ ದೂರಗಳನ್ನು ದಾಖಲಿಸಲು ಸಹಾಯವಾಣಿಯನ್ನು ಪ್ರಾಂರಭಿಸಲಾಗಿದ್ದು, ಸಹಾಯವಾಣಿ ಸಂಖ್ಯೆ: 08539-230912, 9538735359, 7204981304, 9035059159 ನ್ನು ಸಂಪರ್ಕಿಸಿ ದೂರುಗಳನ್ನು ದಾಖಲಿಸಬುಹುದಾಗಿರುತ್ತದೆ.
ಕೊಪ್ಪಳ ನಗರದಲ್ಲಿರುವ ಪ್ರತಿಯೊಬ್ಬ ನಾಗರೀಕರು ಚರಂಡಿಗಳಲ್ಲಿ ಕಸವನ್ನು ಎಸೆಯದೆ ಮಳೆನೀರು ಸರಾಗವಾಗಿ ಹರಿಯಲು ಕ್ರಮವಹಿಸುತ್ತ ಸಾಂಕ್ರಾಮಿಕ ರೋಗಗಳು ವ್ಯಾಪಿಸದಂತೆ ಮುಂಜಾಗೃತ ಕ್ರಮವಹಿಸಲು ನಗರಸಭೆಯೊಂದಿಗೆ ಕೈ ಜೋಡಿಸುವಂತೆ ಕೊಪ್ಪಳ ನಗರಸಭೆ ಕಾರ್ಯಾಲಯದ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್