ಪ್ರತಿಯೊಬ್ಬರಲ್ಲೂ ಅರಿವನ್ನು ಜಾಗೃತಗೊಳಿಸುವ ಬೆಳಕಿನ ಅಗತ್ಯವಿದೆ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು
ಬಳ್ಳಾರಿ, 18 ಮೇ (ಹಿ.ಸ.) : ಆ್ಯಂಕರ್ : ಪ್ರತಿಯೊಬ್ಬರಲ್ಲೂ ಅರಿವನ್ನು ಜಾಗೃತಗೊಳಿಸುವ ಬೆಳಕಿನ ಅಗತ್ಯವಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ತಿಳಿಸಿದ್ದಾರೆ. ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ ಅಕ್ಕನ ಬಳಗದ ಸಹಯೋಗದಲ್ಲಿ ನಡೆದ ಶಿವಾನುಭವ ಸಂಪದ - 13ರಲ್ಲಿ ಆಶೀರ್ವ
ಪ್ರತಿಯೊಬ್ಬರಲ್ಲೂ ಅರಿವನ್ನು ಜಾಗೃತಗೊಳಿಸುವ ಬೆಳಕಿನ ಅಗತ್ಯವಿದೆ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು

ಪ್ರತಿಯೊಬ್ಬರಲ್ಲೂ ಅರಿವನ್ನು ಜಾಗೃತಗೊಳಿಸುವ ಬೆಳಕಿನ ಅಗತ್ಯವಿದೆ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು

ಪ್ರತಿಯೊಬ್ಬರಲ್ಲೂ ಅರಿವನ್ನು ಜಾಗೃತಗೊಳಿಸುವ ಬೆಳಕಿನ ಅಗತ್ಯವಿದೆ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು

ಪ್ರತಿಯೊಬ್ಬರಲ್ಲೂ ಅರಿವನ್ನು ಜಾಗೃತಗೊಳಿಸುವ ಬೆಳಕಿನ ಅಗತ್ಯವಿದೆ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು

ಪ್ರತಿಯೊಬ್ಬರಲ್ಲೂ ಅರಿವನ್ನು ಜಾಗೃತಗೊಳಿಸುವ ಬೆಳಕಿನ ಅಗತ್ಯವಿದೆ : ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು

ಬಳ್ಳಾರಿ, 18 ಮೇ (ಹಿ.ಸ.) :

ಆ್ಯಂಕರ್ : ಪ್ರತಿಯೊಬ್ಬರಲ್ಲೂ ಅರಿವನ್ನು ಜಾಗೃತಗೊಳಿಸುವ ಬೆಳಕಿನ ಅಗತ್ಯವಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ

ಮಹಾಸ್ವಾಮಿಗಳು ತಿಳಿಸಿದ್ದಾರೆ.

ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಮಠದಲ್ಲಿ ಅಕ್ಕನ ಬಳಗದ ಸಹಯೋಗದಲ್ಲಿ ನಡೆದ ಶಿವಾನುಭವ ಸಂಪದ - 13ರಲ್ಲಿ ಆಶೀರ್ವಾದ ಮಾಡಿದ ಶ್ರೀಗಳು, ಸಹಜತೆ, ನೈಸರ್ಗಿಕತೆಯ ವಿಷಯಗಳು - ವಿಚಾರಗಳ ಮೂಲಕ ಪ್ರತಿಯೊಬ್ಬರಲ್ಲೂ ಕಾಯಕದ ಬೆಳಕು, ಶಿವಯೋಗದ ಬೆಳಕು ಸೇರಿ ಜ್ಞಾನ, ಅರಿವು - ವೈರಾಗ್ಯದ ಬೆಳಕನ್ನು ಮೂಡಿಸುವ - ಜಾಗೃತಗೊಳಿಸುವ ನಡೆಯಬೇಕಿದೆ ಎಂದರು.

ಪ್ರಪಂಚದ ಎಲ್ಲಾ ಜ್ಞಾನ ಮತ್ತು ವೈರಾಗ್ಯವನ್ನು ಒಳಗೊಂಡಿರುವುದೇ ಅನುಭವ ಮಂಟಪ. ಅಲ್ಲಮಪ್ರಭುಗಳು ಈ ಅನುಭವ ಮಂಟಪದ ರೂವಾರಿಗಳಾಗಿ ಜ್ಞಾನದ ಬೆಳಕು, ಅರಿವಿನ ಬೆಳಕು ಮೂಡಿಸುವಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಬಸವಾದಿ ಶರಣರ ಮೂಲಕ ವಿಶ್ವಕ್ಕೇ ಬೆಳಕನ್ನು ಮೂಡಿಸಲು ಸಾಕಷ್ಟು ಶ್ರಮಿಸಿದ್ದರು ಎಂದು ಹೇಳಿದರು.

ಜೆ. ದಿವಾಕರ ಅವರು, `ಜ್ಞಾನ ದೀವಿಗೆ ಅಲ್ಲಮಪ್ರಭು' ವಿಷಯದ ಕುರಿತು ಉಪನ್ಯಾಸ ನೀಡಿ, ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ಏನೆಲ್ಲಾ ಘಟನೆಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ. ಹೆಣ್ಣು, ಹೊನ್ನು ಮತ್ತು ಮಣ್ಣಿನ ವಿಚಾರದಲ್ಲಿ ಸಮಾಜದಲ್ಲಿ ಪರಿವರ್ತನೆ ಮೂಡಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಶಾಶ್ವತವಾದದ್ದನ್ನು ಪಡೆಯಲು ಪ್ರತಿಯೊಬ್ಬರೂ ಪ್ರಯತ್ನ ಮಾಡಬೇಕು ಎಂದರು.

ಬ್ರಿಮ್ಸ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎನ್. ಮಂಜುನಾಥ ಅವರು ಮುಖ್ಯ ಅತಿಥಿಗಳಾಗಿ, ಸಮಾಜ ಸೇವೆಯ ಮೂಲಕ ಪ್ರತಿಯೊಬ್ಬರೂ ಸಾಧನೆಯ ಮಾರ್ಗದಲ್ಲಿ ಸಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಶ್ರೀಗಳು ಸಮಾಜಕ್ಕೆ ಮತ್ತು ಸಮಾಜ ಸೇವಾಸಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.

ಎಸ್.ಜಿ. ಪಿಯು ಕಾಲೇಜಿನ ಪ್ರಾಂಶುಪಾಲರಾದ ಶರಣಬಸವರಾಜ ಅವರು, ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಳ್ಳಲು, ಧಾರ್ಮಿಕ ಚಿಂತನೆಗಳನ್ನು ಮೂಡಿಸಿಕೊಳ್ಳಲು ಶಿವಾನುಭವ ಸಂಪದವು ಪೂರಕವಾಗಿದೆ. ಉತ್ತಮ ಜೀವನ ರೂಪಿಸಿಕೊಳ್ಳುವ ಆಸಕ್ತರು ಶರಣರ - ಸಾಧಕರ ಸಾಧನೆಗಳನ್ನು - ಆದರ್ಶಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅಕ್ಕನ ಬಳಗದ ಎಂ. ಲೀಲಾ, ಸುಮಾರೆಡ್ಡಿ ಮತ್ತು ಸುರೇಖಾ ಎಸ್. ಮಲ್ಲನಗೌಡ ಅವರು ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ಮಧುಮತಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ. ಶ್ರೀಮತಿ ಸುಮಂಗಳಮ್ಮ ಅವರು ವಂದನಾರ್ಪಣೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande