
ಗದಗ, 18 ಮೇ (ಹಿ.ಸ.) :
ಆ್ಯಂಕರ್ : ಕಳೆದ ಎರಡು ದಿನಗಳಿಂದ ಸುರಿದ ಗಾಳಿ ಮಳೆಗೆ ಸಾಕಷ್ಟು ಬಡವರಿಗೆ ನಷ್ಟ ಆಗಿರುವುದರಿಂದ ಅದನ್ನು ಪರಿಶಿಲಿಸಿ ಪರಿಹಾರ ನೀಡಲು ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಮಂಡಲ ಅಧ್ಯಕ್ಷರಾದ ಬೂದಪ್ಪ ಹಳ್ಳಿ ರವರು ಆಗ್ರಹಿಸಿದ್ದಾರೆ.
ಅವರಿಂದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಅನೇಕ ಗ್ರಾಮಗಳಲ್ಲಿ ಸಾಕಷ್ಟು ಬಡಜನರ ಮನೆಗಳ ಮಾಲ್ಚಾವಣಿ ಮುರಿದು ಬಿದ್ದು, ಮನೆಗಳ ಮೇಲಿರುವ ತಗಡುಗಳು ಹಾರಿ ಹೋಗಿವೆ ಹಾಗು ಸರ್ಕಾರಿ ಶಾಲೆಗಳ ತಗಡುಗಳು ಗಾಳಿಯ ರಬಸಕ್ಕೆ ಕಿತ್ತುಕೊಂಡು ಹೋಗಿವೆ. ಕಾರಣ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಗಳಿಗೆ ಹೋಗಿ ನಷ್ಟಕ್ಕೆ ಒಳಗಾದ ಎಲ್ಲ ಬಡವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ರವರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP