
ಧಾರವಾಡ, 18 ಮೇ (ಹಿ.ಸ.) :
ಆ್ಯಂಕರ್ : ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಅವರನ್ನು ಸೋಮವಾರ ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಕುರಿತು ದೂರು ಸಲ್ಲಿಸಲಾಯಿತು.
ಸಫಾಯಿ ಕರ್ಮಚಾರಿಗಳಿಗೆ ಕನಿಷ್ಠ ವೇತನ, ಇಎಸ್ಐ, ಇಪಿಎಫ್ ಸೇರಿದಂತೆ ವಿವಿಧ ಕಾರ್ಮಿಕ ಕಾಯ್ದೆಯಡಿ ದೊರೆಯಬೇಕಾದ ಸೌಲಭ್ಯಗಳನ್ನು ನೀಡದೆ ಗುತ್ತಿಗೆದಾರರು ಕಾರ್ಮಿಕರನ್ನು ವಂಚಿಸುತ್ತಿದ್ದಾರೆ ಎಂದು ಸಂಘದ ಪದಾಧಿಕಾರಿಗಳು ಆರೋಪಿಸಿದರು. ಈ ಸಂಬಂಧ ಮಹಿಳಾ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ವೇಳೆ ಸಿವಿಲ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬೆ ಅವರೊಂದಿಗೆ ಸಂಘದ ಜಂಟಿ ಸಭೆ ನಡೆಸಲಾಯಿತು. ಸಭೆಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಶಾಸನಬದ್ಧ ಹಕ್ಕುಗಳು ಹಾಗೂ ಕಾರ್ಮಿಕ ಕಾಯ್ದೆಗಳಡಿ ದೊರೆಯಬೇಕಾದ ಎಲ್ಲಾ ಸೌಲಭ್ಯಗಳನ್ನು ಖಚಿತಪಡಿಸಿಕೊಡಬೇಕು ಎಂದು ಆಗ್ರಹಿಸಲಾಯಿತು.
ಸಂಘದ ಮುಖಂಡರು ಮಾತನಾಡಿ, ಹಲವಾರು ಸಫಾಯಿ ಕರ್ಮಚಾರಿಗಳು ವರ್ಷಗಳಿಂದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಮೂಲಭೂತ ಕಾರ್ಮಿಕ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು. ಕಾರ್ಮಿಕರಿಗೆ ವೇತನ, ಆರೋಗ್ಯ ಭದ್ರತೆ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಡಾ. ವಿಜಯ ಗುಂಟ್ರಾಳ, ಪವನ ಸಗಬಾಳ, ಕನಕಪ್ಪ ಕೋಟಬಾಗಿ, ನರಸಿಂಹ ಮಾದರ, ರಾಕೇಶ ಚುರಮುರಿ, ಪರಶುರಾಮ ಶಿಕ್ಕಲಗಾರ, ಪೂಜಾ ಚಲವಾದಿ, ಸುರೇಶ ಶಿಕ್ಕಲಗಾರ, ಗದಿಗೆಪ್ಪ ಕಟ್ಟಿಮನಿ, ಚನ್ನಪ್ಪ ನವಲಗುಂದ, ನೀಲವ್ವ ಭಜಂತ್ರಿ, ಮಂಜುನಾಥ ಕಟ್ಟಿಮನಿ, ರತ್ನ ಕರೆನ್ನವರ, ರಾಜೇಶ್ವರಿ ನಾರಾಯಣಕರ, ದೀಪಕ ಕಿಕ್ಕಳಕರ, ಮೈಲಾರಿ ಗುರಕ್ಕನವರ, ಮಂಜುನಾಥ ಗುಗ್ಗರಿ, ಮೆಹಬೂಬ್ ಅತ್ತಾರ, ದೇವಪ್ಪ ತಡಿಹಾಳ, ಜಹೀರಾ ಸೌದಾಗರ, ಮಹಾಂತೇಶ ಕಟ್ಟಿಮನಿ, ಬಸವರಾಜ ಚಿಂತಾಮಣಿ, ಅಕ್ಷಮ್ಮ ಬೆಳವಡಿ, ಮಂಜುಳಾ ಬಡಿಗೇರ, ಶೋಭಾ ಹಾಗೂ ಯಶೋದಾ ಕಲಘಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.