ನೆದರ್ಲೆಂಡ್ ನ ಐತಿಹಾಸಿಕ ಅಣೆಕಟ್ಟಿಗೆ ಪ್ರಧಾನಿ ಮೋದಿ ಭೇಟಿ
ಹೇಗ್/ಅಂಸ್ಟರ್ಡ್ಯಾಮ್, 17 ಮೇ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಆರು ದಿನಗಳ ಐದು ರಾಷ್ಟ್ರಗಳ ಪ್ರವಾಸದ ಮೂರನೇ ದಿನದಂದು ನೆದರ್ಲೆಂಡ್ ಐತಿಹಾಸಿಕ ಅಫ್ಸ್ಲುಯಿಡಿಜ್ಕ್ ಅಣೆಕಟ್ಟಿಗೆ ಭೇಟಿ ನೀಡಿ ಜಲ ನಿರ್ವಹಣೆಯಲ್ಲಿ ಡಚ್ ಮಾದರಿಯನ್ನು ಶ್ಲಾಘಿಸಿದರು. ಈ ವೇಳೆ ನೆದರ್ಲೆಂಡ
ಪ್ರಧಾನಿ ಭೇಟಿ


ಹೇಗ್/ಅಂಸ್ಟರ್ಡ್ಯಾಮ್, 17 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಆರು ದಿನಗಳ ಐದು ರಾಷ್ಟ್ರಗಳ ಪ್ರವಾಸದ ಮೂರನೇ ದಿನದಂದು ನೆದರ್ಲೆಂಡ್ ಐತಿಹಾಸಿಕ ಅಫ್ಸ್ಲುಯಿಡಿಜ್ಕ್ ಅಣೆಕಟ್ಟಿಗೆ ಭೇಟಿ ನೀಡಿ ಜಲ ನಿರ್ವಹಣೆಯಲ್ಲಿ ಡಚ್ ಮಾದರಿಯನ್ನು ಶ್ಲಾಘಿಸಿದರು. ಈ ವೇಳೆ ನೆದರ್ಲೆಂಡ್ಸ್ ಪ್ರಧಾನಿ ರೊಬ್ ಜೆಟಿನ್ ಕೂಡ ಅವರೊಂದಿಗೆ ಉಪಸ್ಥಿತರಿದ್ದರು.

ಉಭಯ ನಾಯಕರು ಜಲ ನಿರ್ವಹಣೆ, ಪ್ರವಾಹ ನಿಯಂತ್ರಣ, ಸಮುದ್ರದ ನೀರನ್ನು ನಿಯಂತ್ರಿಸುವ ತಂತ್ರಜ್ಞಾನ ಹಾಗೂ ಸಿಹಿನೀರಿನ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಪರಿಶೀಲಿಸಿದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ, ಜಲ ಸಂಪನ್ಮೂಲ ನಿರ್ವಹಣೆಯಲ್ಲಿ ನೆದರ್ಲೆಂಡ್ಸ್ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಅಫ್ಸ್ಲುಯಿಡಿಜ್ಕ್ ಯೋಜನೆಯ ಪ್ರಮುಖ ವೈಶಿಷ್ಟ್ಯಗಳನ್ನು ಸಮೀಪದಿಂದ ಅರಿಯುವ ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದು ತಿಳಿಸಿ, ಆತಿಥ್ಯಕ್ಕಾಗಿ ರಾಬ್ ಜೆಟ್ಟನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಭಾರತದಲ್ಲಿ ನೀರಾವರಿ, ಪ್ರವಾಹ ನಿಯಂತ್ರಣ ಮತ್ತು ಒಳನಾಡು ಜಲಮಾರ್ಗಗಳ ವಿಸ್ತರಣೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸುವ ದಿಕ್ಕಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಜಲ ನಿರ್ವಹಣಾ ಕ್ಷೇತ್ರದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಅಪಾರ ಅವಕಾಶಗಳಿವೆ ಎಂದು ಅಭಿಪ್ರಾಯಪಟ್ಟರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಈ ಭೇಟಿಯನ್ನು ಮಹತ್ವದ ಬೆಳವಣಿಗೆ ಎಂದು ಬಣ್ಣಿಸಿದರು. ಜಲ ನಿರ್ವಹಣೆ, ಪ್ರವಾಹ ರಕ್ಷಣೆ ಹಾಗೂ ಸಿಹಿನೀರಿನ ಸಂಗ್ರಹಣೆಯಲ್ಲಿ ಡಚ್ ಎಂಜಿನಿಯರಿಂಗ್ ಶ್ರೇಷ್ಠತೆಯ ಪ್ರತೀಕವಾಗಿರುವ ಅಫ್ಸ್ಲುಯಿಡಿಜ್ಕ್ ಅಣೆಕಟ್ಟಿಗೆ ಇಬ್ಬರು ಪ್ರಧಾನಿಗಳ ಭೇಟಿ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಗುಜರಾತಿನ ಖಂಭಾತ್ ಕೊಲ್ಲಿಯ ಸಮೀಪ ರೂಪುಗೊಳ್ಳಲಿರುವ ಮಹತ್ವಾಕಾಂಕ್ಷೆಯ ಕಲ್ಪ್ಸರ್ ಯೋಜನೆ ಯೋಜನೆಗೆ ಈ ಭೇಟಿ ಹೊಸ ಪ್ರೇರಣೆಯಾಗಲಿದೆ ಎಂದು ಅವರು ತಿಳಿಸಿದರು. ಹವಾಮಾನ ಹೊಂದಾಣಿಕೆ, ಜಲ ತಂತ್ರಜ್ಞಾನ ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಭಾರತ-ನೆದರ್ಲೆಂಡ್ಸ್ ಸಹಭಾಗಿತ್ವಕ್ಕೆ ಇದು ಹೊಸ ದಿಕ್ಕು ನೀಡಲಿದೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande