ಧಾರವಾಡದಲ್ಲಿ ಸಿಡಿಲು ದುರಂತ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಸಾವು, ಪತಿಗೆ ಗಾಯ
ಧಾರವಾಡ, 17 ಮೇ (ಹಿ.ಸ.) : ಆ್ಯಂಕರ್ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಂಪತಿಗೆ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿ, ಪತಿ ಗಾಯಗೊಂಡ ದುರ್ಘಟನೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಕವಲಗೇರಿ ಗ್ರಾಮದ ಜಯಶ್ರೀ ಹನುಮಂತಪ್ಪ ಶಿರಸಂಗಿ ಮೃತ ಮಹಿಳೆ ಎಂದು ಗುರುತಿಸಲ
ಧಾರವಾಡದಲ್ಲಿ ಸಿಡಿಲು ದುರಂತ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಸಾವು, ಪತಿಗೆ ಗಾಯ


ಧಾರವಾಡ, 17 ಮೇ (ಹಿ.ಸ.) :

ಆ್ಯಂಕರ್ : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಂಪತಿಗೆ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿ, ಪತಿ ಗಾಯಗೊಂಡ ದುರ್ಘಟನೆ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಕವಲಗೇರಿ ಗ್ರಾಮದ ಜಯಶ್ರೀ ಹನುಮಂತಪ್ಪ ಶಿರಸಂಗಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಉಳುಮೆ ಮಾಡುತ್ತಿರುವ ಹೊಲದಲ್ಲಿ ದಂಪತಿಗಳು ಮೆಂತ್ಯೆ ಕೀಳುವ ಕೆಲಸದಲ್ಲಿ ತೊಡಗಿದ್ದಾಗ ಏಕಾಏಕಿ ಸಿಡಿಲು ಬಡಿದಿದೆ.

ಸಿಡಿಲಿನ ಅಬ್ಬರಕ್ಕೆ ಜಯಶ್ರೀ ಹಾಗೂ ಅವರ ಪತಿ ಹನುಮಂತಪ್ಪ ಇಬ್ಬರೂ ಗಾಯಗೊಂಡಿದ್ದು, ಜಯಶ್ರೀ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಹನುಮಂತಪ್ಪ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕನಕೂರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande