
ಕೋಲಾರ, ೧೭ ಮೇ (ಹಿ.ಸ) :
ಆ್ಯಂಕರ್ : ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಈವರೆಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾಗಿದ್ದ ಕೋಲಾರದವರೇ ಆದ ಕೆ.ಉಮಾ ಅವರನ್ನು ಸ್ಥಳ ನಿಯುಕ್ತಿಗೊಳಿಸಿ ಸರ್ಕಾರ ಆದೇಶಿಸಿದೆ.
ಈವರೆಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಮಧುಮಾಲತಿ ಪಡುವಣೆ ಅವರನ್ನು ಆಯುಕ್ತರ ಕಚೇರಿ ಸಹಾಯಕ ನಿರ್ದೇಶಕರಾಗಿ ವರ್ಗಾವಣೆ ಮಾಡಿದ್ದು ಅವರ ಸ್ಥಾನಕ್ಕೆ ಉಮಾ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕೋಲಾರ ತಾಲ್ಲೂಕಿನ ಶೈಕ್ಷಣಿ ಸಮಸ್ಯೆಗಳ ಸಮಗ್ರ ಪರಿಚಯ ಹೊಂದಿರುವ ಉಮಾ ಅವರು ಡಯಟ್ನಲ್ಲಿ ಹಿರಿಯ ಉಪನ್ಯಾಸಕರಾಗಿ, ನಂತರ ಕಳೆದ ವರ್ಷ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾಗಿ ನೇಮಕಗೊಂಡಿದ್ದ ಅವರು, ಕೋಲಾರದ ಬಿಇಒ ಆಗಿ ಹಲವು ತಿಂಗಳುಗಳ ಕಾಲ ಕೆಲಸವನ್ನೂ ಮಾಡಿದ್ದರು.
ಇದೀಗ ಅವರನ್ನು ಕೋಲಾರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್