
ಕೊಪ್ಪಳ, 17 ಮೇ (ಹಿ.ಸ.) :
ಆ್ಯಂಕರ್ : ಭಾಗ್ಯನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮಗಳು-2026 ನ್ನು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯದಿಂದ ಅಧಿಸೂಚನೆ ಜಾರಿಗೆ ಬಂದಿರುತ್ತದೆ.
ಭಾಗ್ಯನಗರ ಪಟ್ಟಣ ಪಂಚಾಯತ ಭಾಗ್ಯನಗರ ವ್ಯಾಪ್ತಿಯ ವಾರ್ಡಗಳಲ್ಲಿನ ಸಾರ್ವಜನಿಕರು ನಾಲ್ಕು ರೀತಿಯ ತ್ಯಾಜ್ಯಗಳಾದ ಹಸಿತ್ಯಾಜ್ಯ, ಒಣತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯಗಳನ್ನು ಹಾಗೂ ವಿಶೆಷ ರೀತಿಯ ತ್ಯಾಜ್ಯಗಳು (ಬಲ್ಬ್ ಗಳು, ಬ್ಯಾಟರಿಗಳು, ಅವಧಿ ಮೀರಿದ ಔಷಧಗಳು. ಪೇಂಟ್ ಡಬ್ಬಿಗಳು ಇತ್ಯಾದಿ) ವಿಂಗಡಣೆಯನ್ನು ಕಡ್ಡಾಯವಾಗಿ ಮಾಡಬೇಕು ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಉದ್ದಿಮೆದಾರರು, ಕಲ್ಯಾಣ ವ್ಯವಸ್ಥಾಪಕರು, ಬಾರ್ & ರೆಸ್ಟೋರೆಂಟ್ ಮಾಲೀಕರು ಮತ್ತು ಇತರೆ ಉದ್ದಿಮೆದಾರರಿಗೆ ಈ ಮೂಲಕ ಸೂಚಿಸಲಾಗಿದೆ.
ಘನತ್ಯಾಜ್ಯ ವಸ್ತು ನಿರ್ವಹಣಾ ನಿಯಮಗಳು-2026 ರನ್ವಯ 100 ಕೆ.ಜಿ ತ್ಯಾಜ್ಯ ಅಥವಾ 40 ಸಾವಿರ ಲೀ. ನೀರು ಅಥವಾ 20 ಸಾವಿರ ಚ.ಮೀ. ಗಿಂತ ಹೆಚ್ಚಿನ ವಿಸ್ತೀರ್ಣವುಳ್ಳ ವಾಣಿಜ್ಯ ಪ್ರದೇಶವುಳ್ಳವರು ಇನ್ನು ಮುಂದೆ ಬೃಹತ್ ತ್ಯಾಜ್ಯ ಉದ್ಘಾದಕರು (ಬಿ.ಡಬ್ಲ್ಯೂ ಜಿ ಎಸ್ ) ಎಂದು ಘೋಷಿಸಲಾಗಿದೆ.
ಬೃಹತ್ ತ್ಯಾಜ್ಯ ಉತ್ಪಾದಕರು (ಬಿ.ಡಬ್ಲ್ಯೂ ಜಿ ಎಸ್) ತಮ್ಮ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸ್ಥಳದಲ್ಲಿತಯೇ (In-Situ) ಸಂಸ್ಕರಿಸಬೇಕು. ತ್ಯಾಜ್ಯ ಸಂಸ್ಕರಣಾ ಸೌಲಭ್ಯವು ಲಭ್ಯವಿಲ್ಲದಿದ್ದಲ್ಲಿ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ತ್ಯಾಜ್ಯಗಳನ್ನು ವಿಂಗಡಿಸಿ ನೀಡತಕ್ಕದ್ದು ಹಾಗೂ ಕಾರ್ಯಾಲಯವು ನಿಗದಿಪಡಿಸಿದ ಶುಲ್ಕವನ್ನು ಪಾವತಿಸಬೇಕು.
ಈ ನಿಯಮಗಳನ್ನು ಉಲ್ಲಂಘಿಸುವ (ಬಿ.ಡಬ್ಲ್ಯೂ ಜಿ ಎಸ್)ರ ವಿರುದ್ಧ ನೀರು ಅಥವಾ ವಿದ್ಯುತ್ ಸೇವೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಇತರೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭಾಗ್ಯನಗರ ಪಂಚಾಯತಿ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್