ರಾಷ್ಟ್ರಸೇವೆ ಮತ್ತು ಸಂಘಟನೆ ಬಲವರ್ಧನೆಗೆ ಸಮರ್ಪಣಾಭಾವ ಅಗತ್ಯ : ಅಶೋಕ
ಬೆಂಗಳೂರು, 17 ಮೇ (ಹಿ.ಸ.) : ಆ್ಯಂಕರ್ : “ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026” ಅಂಗವಾಗಿ ಆಯೋಜಿಸಲಾದ ಭಾಜಪ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಅಶೋಕ


ಬೆಂಗಳೂರು, 17 ಮೇ (ಹಿ.ಸ.) :

ಆ್ಯಂಕರ್ : “ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026” ಅಂಗವಾಗಿ ಆಯೋಜಿಸಲಾದ ಭಾಜಪ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಸೇವೆಯ ಮೌಲ್ಯಗಳು, ಸಂಘಟನೆ ಬಲವರ್ಧನೆ ಹಾಗೂ ಕಾರ್ಯಕರ್ತರ ಜವಾಬ್ದಾರಿಗಳ ಕುರಿತು ಚರ್ಚೆ ನಡೆಯಿತು. ದೇಶದ ಅಭಿವೃದ್ಧಿ ಮತ್ತು ಸಂಘಟನೆಯ ಶಕ್ತಿವರ್ಧನೆಗಾಗಿ ಪ್ರತಿಯೊಬ್ಬ ಕಾರ್ಯಕರ್ತನೂ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಆರ್. ಅಶೋಕ್ ಕರೆ ನೀಡಿದರು.

ಪಕ್ಷದ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದ್ದು, ಸಂಘಟನೆಯ ಬಲವೇ ಪಕ್ಷದ ಯಶಸ್ಸಿನ ಮೂಲ ಎಂದು ಹೇಳಿದರು. ಶಿಸ್ತು, ಸೇವಾಭಾವ ಮತ್ತು ಸಂಘಟಿತ ಕಾರ್ಯಪದ್ಧತಿಯ ಮೂಲಕ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಸಲಹೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande