ಮತ್ತೆ ಏರಿಕೆಯಾದ ಸಿಎನ್ಜಿ ದರ
ನವದೆಹಲಿ, 17 ಮೇ (ಹಿ.ಸ.) : ಆ್ಯಂಕರ್ : ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಸಂಕುಚಿತ ನೈಸರ್ಗಿಕ ಅನಿಲದ ದರವನ್ನು ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಹೆಚ್ಚಿಸಲಾಗಿದ್ದು, ಹೊಸ ದರಗಳು ಭಾನುವಾರದಿಂದ ಜಾರಿಗೆ ಬಂದಿವೆ. ಇತ್ತೀಚಿನ ಏರಿಕೆಯ ಬಳಿಕ ದೆಹಲಿಯಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ ₹1 ಹೆಚ್ಚಳ
Cng pump


ನವದೆಹಲಿ, 17 ಮೇ (ಹಿ.ಸ.) :

ಆ್ಯಂಕರ್ : ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಸಂಕುಚಿತ ನೈಸರ್ಗಿಕ ಅನಿಲದ ದರವನ್ನು ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿಗೆ ಹೆಚ್ಚಿಸಲಾಗಿದ್ದು, ಹೊಸ ದರಗಳು ಭಾನುವಾರದಿಂದ ಜಾರಿಗೆ ಬಂದಿವೆ.

ಇತ್ತೀಚಿನ ಏರಿಕೆಯ ಬಳಿಕ ದೆಹಲಿಯಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ ₹1 ಹೆಚ್ಚಳಗೊಂಡು ₹80.09ಕ್ಕೆ ತಲುಪಿದೆ. ಇದಕ್ಕೂ ಮೊದಲು ಅನಿಲ ವಿತರಣೆ ಕಂಪನಿಗಳು ಸಿಎನ್‌ಜಿ ದರವನ್ನು ಪ್ರತಿ ಕೆಜಿಗೆ ₹2 ಹೆಚ್ಚಿಸಿದ್ದವು. ಇದರೊಂದಿಗೆ ಕೇವಲ ಮೂರು ದಿನಗಳ ಅವಧಿಯಲ್ಲಿ ಸಿಎನ್‌ಜಿ ದರ ಒಟ್ಟು ₹3ರಷ್ಟು ಏರಿಕೆಯಾಗಿದೆ.

ಹೊಸ ದರಪಟ್ಟಿಯ ಪ್ರಕಾರ, ನೋಯ್ಡಾ ಮತ್ತು ಗಾಜಿಯಾಬಾದ್ ಪ್ರದೇಶಗಳಲ್ಲಿ ಸಿಎನ್‌ಜಿ ದರ ಪ್ರತಿ ಕೆಜಿಗೆ ₹88.7 ಆಗಿದೆ. ಅದೇ ವೇಳೆ ಮುಂಬೈನಲ್ಲಿ ಸಿಎನ್ಜಿ ದರ ಪ್ರತಿ ಕೆಜಿಗೆ ಸುಮಾರು ₹84ಕ್ಕೆ ತಲುಪಿದೆ.

ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿಯೂ ಪ್ರತಿ ಲೀಟರಿಗೆ ₹3ವರೆಗೆ ಹೆಚ್ಚಳ ಮಾಡಲಾಗಿತ್ತು. ಇದೀಗ ಸಿಎನ್‌ಜಿ ದರದಲ್ಲೂ ನಿರಂತರ ಏರಿಕೆ ಕಂಡು ಬರುತ್ತಿರುವುದರಿಂದ ಸಾರ್ವಜನಿಕ ಸಾರಿಗೆ, ಟ್ಯಾಕ್ಸಿ ಸೇವೆ ಹಾಗೂ ಖಾಸಗಿ ವಾಹನ ಚಾಲಕರ ಮೇಲಿನ ವೆಚ್ಚದ ಭಾರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande