ಪ್ರಥಮ ವರ್ಷದ ಡಿಪಿಎಸ್ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಚಿತ್ರದುರ್ಗ, 17 ಮೇ (ಹಿ.ಸ.) : ಆ್ಯಂಕರ್ : ಕೇಂದ್ರಿಕೃತ ದಾಖಲಾತಿ ಘಟಕದ ವತಿಯಿಂದ ಡಿ.ಪಿ.ಎಸ್.ಇ (ಡಿಪ್ಲೊಮೋ ಇನ್ ಪ್ರೀ ಪ್ರೈಮರಿ ಎಜುಕೇಷನ್) ಕೋರ್ಸ್ ಪ್ರವೇಶಕ್ಕೆ ಅರ್ಜಿಗಳನ್ನು ಅಹ್ವಾನಿಸಿದ್ದು, ಹೊಸದುರ್ಗ ಪಟ್ಟಣದಲ್ಲಿರುವ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಅರ್ಜಿ ವಿತರಣೆ ಮತ್ತು ಸ್ಪೀಕೃ
ಪ್ರಥಮ ವರ್ಷದ ಡಿಪಿಎಸ್ಇ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಚಿತ್ರದುರ್ಗ, 17 ಮೇ (ಹಿ.ಸ.) :

ಆ್ಯಂಕರ್ : ಕೇಂದ್ರಿಕೃತ ದಾಖಲಾತಿ ಘಟಕದ ವತಿಯಿಂದ ಡಿ.ಪಿ.ಎಸ್.ಇ (ಡಿಪ್ಲೊಮೋ ಇನ್ ಪ್ರೀ ಪ್ರೈಮರಿ ಎಜುಕೇಷನ್) ಕೋರ್ಸ್ ಪ್ರವೇಶಕ್ಕೆ ಅರ್ಜಿಗಳನ್ನು ಅಹ್ವಾನಿಸಿದ್ದು, ಹೊಸದುರ್ಗ ಪಟ್ಟಣದಲ್ಲಿರುವ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಅರ್ಜಿ ವಿತರಣೆ ಮತ್ತು ಸ್ಪೀಕೃತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಜೂನ್ 01 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಈ ಕೋರ್ಸ್ ಎರಡು ವರ್ಷಗಳದ್ದಾಗಿದ್ದು, ಕೋರ್ಸ್ ಮುಗಿದ ನಂತರ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಅರ್ಹತೆ ಹೊಂದಲಾಗುತ್ತದೆ. ರಾಜ್ಯದಲ್ಲಿ ಕೇವಲ ಎರಡು ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಮಾತ್ರ ಕೋರ್ಸ್ ಚಾಲನೆಯಲ್ಲಿದ್ದು, ಈ ಕೋರ್ಸ್ ಗೆ ಪ್ರವೇಶ ಪಡೆಯಲು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಎಸ್ಸಿ/ಎಸ್ಟಿ/ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳು ಕನಿಷ್ಟ ಶೇ.45 ಹಾಗೂ ಇತರೆ ಅಭ್ಯರ್ಥಿಗಳು ಕನಿಷ್ಟ ಶೇ.50 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣವಾಗಿರುವುದು ಕಡ್ಡಾಯವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮೊ.9980674494, 9480245650 ಹಾಗೂ ಕಾಲೇಜಿನ ಅವಧಿಯ ಸಮಯದಲ್ಲಿ ಹೊಸದುರ್ಗ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಕಚೇರಿ ಸಂಪರ್ಕಿಸಬಹುದು ಎಂದು ಪ್ರಾಂಶುಪಾಲ ಬಿ.ಆರ್.ಶಶಿಧರ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande