ಮೆಟ್ರೋದಲ್ಲಿ ಸಂಚರಿಸಿದ ವಿಜಯೇಂದ್ರ
ಬೆಂಗಳೂರು, 16 ಮೇ (ಹಿ.ಸ.) : ಆ್ಯಂಕರ್ : ಇಂಧನ ಮಿತವ್ಯಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿರುವ ಕರೆಗೆ ಬೆಂಬಲ ಸೂಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಮಾದರಿಯಾಗಿದ್ದಾರೆ. ಪ್ರಧಾನಿ ಮೋದಿ ಇಂಧನ ಉಳಿತಾಯದ ಸಂದೇಶ ನೀಡುವ ಉದ್ದೇಶದಿಂದ ತಮ್ಮ
ByV


ಬೆಂಗಳೂರು, 16 ಮೇ (ಹಿ.ಸ.) :

ಆ್ಯಂಕರ್ : ಇಂಧನ ಮಿತವ್ಯಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿರುವ ಕರೆಗೆ ಬೆಂಬಲ ಸೂಚಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಮಾದರಿಯಾಗಿದ್ದಾರೆ.

ಪ್ರಧಾನಿ ಮೋದಿ ಇಂಧನ ಉಳಿತಾಯದ ಸಂದೇಶ ನೀಡುವ ಉದ್ದೇಶದಿಂದ ತಮ್ಮ ಬೆಂಗಾವಲು ಪಡೆಯನ್ನೂ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ, ವಿಜಯೇಂದ್ರ ಅವರು ಸಹ ತಮ್ಮ ಕಾರು ಹಾಗೂ ಬೆಂಗಾವಲು ವಾಹನಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ.

ಕುಂಬಳಗೂಡಿನಲ್ಲಿ ನಡೆಯಲಿರುವ ಬೆಂಗಳೂರು ದಕ್ಷಿಣ ಪ್ರಶಿಕ್ಷಣ ವರ್ಗ ಕಾರ್ಯಾಗಾರದಲ್ಲಿ ಭಾಗವಹಿಸಲು ಅವರು ಮೆಜೆಸ್ಟಿಕ್ನಿಂದ ಕೆಂಗೇರಿ ತನಕ ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು.

ಈ ವೇಳೆ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಹರೀಶ್ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande