ರಾಜ್ಯ ಸರ್ಕಾರದಿಂದ ಲೂಟಿ ದರ್ಬಾರ್ : ಆರ್. ಅಶೋಕ್
ಬೆಂಗಳೂರು, 16 ಮೇ (ಹಿ.ಸ.) : ಆ್ಯಂಕರ್ : ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಳೆದ 49 ತಿಂಗಳುಗಳ ಕಾಲ ಜಾಗತಿಕ ಯುದ್ಧಗಳು ಹಾಗೂ ತೈಲ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಹೊರೆ ಹಾಕಿಲ್ಲ ಎಂದು
Ashok post


ಬೆಂಗಳೂರು, 16 ಮೇ (ಹಿ.ಸ.) :

ಆ್ಯಂಕರ್ : ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕಳೆದ 49 ತಿಂಗಳುಗಳ ಕಾಲ ಜಾಗತಿಕ ಯುದ್ಧಗಳು ಹಾಗೂ ತೈಲ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಹೊರೆ ಹಾಕಿಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತವನ್ನು ಶ್ಲಾಘಿಸಿದ ಅವರು, “ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದು ದಾಖಲೆಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಯನ್ಮಾರ್ನಲ್ಲಿ 89.7 ಶೇಕಡಾ, ಪಾಕಿಸ್ತಾನದಲ್ಲಿ 54.9 ಶೇಕಡಾ ಹಾಗೂ ಅಮೆರಿಕದಲ್ಲಿ 44.5 ಶೇಕಡಾ ತೈಲ ದರ ಏರಿಕೆಯಾದರೂ, ಭಾರತದಲ್ಲಿ ಕೇವಲ 3.2 ಶೇಕಡಾ ಮಾತ್ರ ಏರಿಕೆಯಾಗಿದೆ. ಇದು ಮೋದಿ ಸರ್ಕಾರದ ದಕ್ಷ ಆಡಳಿತಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಅಶೋಕ್, ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್ಗೆ ₹3 ಹಾಗೂ ಡೀಸೆಲ್ಗೆ ₹5.5 ಹೆಚ್ಚಳ ಮಾಡಿದೆ ಎಂದು ಆರೋಪಿಸಿದ್ದಾರೆ.

ಜೂನ್ 2024ರಲ್ಲಿ ಡೀಸೆಲ್ ದರವನ್ನು ₹3.50 ಹೆಚ್ಚಿಸಲಾಗಿದ್ದು, ಏಪ್ರಿಲ್ 2025ರಲ್ಲಿ ಮತ್ತಷ್ಟು ₹2 ಏರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹಾಲಿನ ದರ ₹9 ಹೆಚ್ಚಳಗೊಂಡಿದ್ದು, ವಿದ್ಯುತ್ ದರ ಯೂನಿಟ್ಗೆ 56 ಪೈಸೆ ಏರಿಕೆಯಾಗಿದೆ. ಜೊತೆಗೆ ಬಸ್ ಪ್ರಯಾಣ ದರವನ್ನು 15 ಶೇಕಡಾ ಹೆಚ್ಚಿಸಲಾಗಿದೆ ಎಂದು ಆರೋಪಿಸಿದ್ದಾರೆ.

ನೀರು, ಆಸ್ತಿ ತೆರಿಗೆ ಹಾಗೂ ಮೆಟ್ರೋ ದರಗಳನ್ನೂ ಏರಿಕೆ ಮಾಡಿರುವ ರಾಜ್ಯ ಸರ್ಕಾರ, ಜನಸಾಮಾನ್ಯರ ಜೇಬಿಗೆ ಕನ್ನ ಹಾಕುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ. “ಒಂದು ಕೈಯಲ್ಲಿ ₹2000 ಗ್ಯಾರಂಟಿ ತೋರಿಸಿ, ಮತ್ತೊಂದು ಕೈಯಲ್ಲಿ ತಿಂಗಳಿಗೆ ₹4000ಕ್ಕೂ ಹೆಚ್ಚು ಹಣವನ್ನು ಜನರಿಂದ ವಸೂಲಿ ಮಾಡಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಟೀಕಿಸುವ ಮೊದಲು ರಾಜ್ಯ ಸರ್ಕಾರವೇ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಕಡಿಮೆ ಮಾಡಲಿ, ಹಾಲಿನ ದರ ಇಳಿಸಲಿ ಎಂದು ಕಾಂಗ್ರೆಸ್ ನಾಯಕರಿಗೆ ಅಶೋಕ್ ಸವಾಲು ಹಾಕಿದ್ದಾರೆ.

“ಕಳೆದ 49 ತಿಂಗಳುಗಳ ಕಾಲ ಜಾಗತಿಕ ಬಿಕ್ಕಟ್ಟಿನ ನಡುವೆಯೂ ತೈಲ ದರ ಏರಿಸದ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ನೈತಿಕ ಹಕ್ಕು ಕಾಂಗ್ರೆಸ್ಗೆ ಇಲ್ಲ” ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande