ನೆದರ್ಲ್ಯಾಂಡ್ ನಲ್ಲಿ ಪ್ರಧಾನಿ ಮೋದಿ ಗೆ ಭವ್ಯ ಸ್ವಾಗತ
Pm nedarland


ನವದೆಹಲಿ, 16 ಮೇ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಯೂರೋಪಿನ ದೇಶವಾದ ನೆದರ್ಲ್ಯಾಂಡ್ ಪ್ರವಾಸದ ಅಂಗವಾಗಿ ಶುಕ್ರವಾರ ಅಲ್ಲಿಗೆ ಆಗಮಿಸಿದ್ದು, ಭಾರತೀಯ ಮೂಲದ ಸಮುದಾಯದಿಂದ ಭವ್ಯ ಸ್ವಾಗತ ದೊರೆಯಿತು. ಪ್ರಧಾನಿ ಮೋದಿ ಅವರು ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸ್ವಾಗತ ಸಮಾರಂಭದ ಕೆಲವು ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

“ನಿನ್ನೆ ನೆದರ್ಲ್ಯಾಂಡ್ಗೆ ಆಗಮಿಸಿದಾಗ ಭಾರತೀಯ ಸಮುದಾಯ ನೀಡಿದ ಆತ್ಮೀಯ ಸ್ವಾಗತ ನಿಜಕ್ಕೂ ವಿಶೇಷವಾಗಿತ್ತು. ಪ್ರವಾಸಿ ಭಾರತೀಯರ ಪ್ರೀತಿ, ಉತ್ಸಾಹ ಮತ್ತು ಆತ್ಮೀಯತೆ ಮನಸಿಗೆ ತಟ್ಟಿದೆ” ಎಂದು ಪ್ರಧಾನಿ ಮೋದಿ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ನೆದರ್ಲ್ಯಾಂಡ್ನಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಪ್ರಧಾನಿ ಸ್ವಾಗತಕ್ಕಾಗಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾರತದ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯ ಅನನ್ಯ ಝಲಕ್ ಕಾಣಿಸಿತು.

ಸ್ವಾಗತ ಸಮಾರಂಭದಲ್ಲಿ ಭಾರತೀಯರು ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ನೃತ್ಯ ಶೈಲಿಗಳನ್ನು ಪ್ರದರ್ಶಿಸಿದರು. ಕಥಕ್, ಒಡಿಸ್ಸಿ, ಭರತನಾಟ್ಯ, ಕುಚಿಪುಡಿ ಹಾಗೂ ಮೋಹಿನಿಯಾಟಂ ಸೇರಿದಂತೆ ಹಲವು ನೃತ್ಯ ರೂಪಗಳು ಪ್ರದರ್ಶನಗೊಂಡವು. ಜೊತೆಗೆ ಗುಜರಾತಿನ ಪ್ರಸಿದ್ಧ ಗರ್ಭಾ ನೃತ್ಯವೂ ವಿಶೇಷ ಆಕರ್ಷಣೆಯಾಯಿತು.

ಈ ಮೊದಲು ಪ್ರಧಾನಿ ಮೋದಿ ಅವರು ಎಕ್ಸ್ನಲ್ಲಿ “ನಾನು ಆಮ್ಸ್ಟರ್ಡ್ಯಾಮ್ಗೆ ತಲುಪಿದ್ದೇನೆ” ಎಂದು ತಿಳಿಸಿದ್ದರು. ಭಾರತ ಮತ್ತು ಯೂರೋಪಿಯನ್ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವೇಗ ಸಿಕ್ಕಿರುವ ಸಮಯದಲ್ಲಿ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ನೆದರ್ಲ್ಯಾಂಡ್ ಪ್ರಧಾನಿ ರಾಬ್ ಜೆಟೆನ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ರಾಜ ವಿಲೆಮ್-ಅಲೆಕ್ಸಾಂಡರ್ ಹಾಗೂ ರಾಣಿ ಮ್ಯಾಕ್ಸಿಮಾ ಅವರನ್ನು ಭೇಟಿ ಮಾಡಲಿದ್ದಾರೆ.

ಭಾರತ–ನೆದರ್ಲ್ಯಾಂಡ್ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಸೆಮಿಕಂಡಕ್ಟರ್, ನೀರು ನಿರ್ವಹಣೆ, ಸ್ವಚ್ಛ ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಉದ್ದೇಶದಿಂದ ಈ ಪ್ರವಾಸ ಮಹತ್ವ ಪಡೆದಿದೆ.

ಪ್ರಧಾನಿ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್, ನೆದರ್ಲ್ಯಾಂಡ್, ಸ್ವೀಡನ್, ನಾರ್ವೆ ಹಾಗೂ ಇಟಲಿ ಸೇರಿ ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಮೊದಲ ಹಂತದಲ್ಲಿ ಯುಎಇಗೆ ಭೇಟಿ ನೀಡಿದ ಅವರು ಬಳಿಕ ನೆದರ್ಲ್ಯಾಂಡ್ಗೆ ಆಗಮಿಸಿದ್ದು, ಮೇ 17ರವರೆಗೆ ಅಲ್ಲೇ ತಂಗಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande