ಮಾದಕ ವಸ್ತು ಮುಕ್ತ ಭಾರತಕ್ಕೆ ಸರಕಾರ ಬದ್ದ : ಅಮಿತ್ ಶಾ
ನವದೆಹಲಿ, 16 ಮೇ (ಹಿ.ಸ.) : ಆ್ಯಂಕರ್ : ಭಾರತವನ್ನು ಮಾದಕ ವಸ್ತು ಮುಕ್ತ ರಾಷ್ಟ್ರವನ್ನಾಗಿ ರೂಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ‘ಆಪರೇಷನ್ ರೇಜ್ಪಿಲ್’ ಕಾರ್ಯಾಚರಣೆಯಡಿ ₹182 ಕೋಟಿ ಮೌಲ್ಯದ “ಜಿಹಾದಿ ಡ್ರಗ್” ಎಂದು ಕರೆಯಲ್ಪಡುವ ಕ್ಯಾಪ್ಟಗನ್ ಮಾದ
ಅಮಿತ್ ಶಾ


ನವದೆಹಲಿ, 16 ಮೇ (ಹಿ.ಸ.) :

ಆ್ಯಂಕರ್ : ಭಾರತವನ್ನು ಮಾದಕ ವಸ್ತು ಮುಕ್ತ ರಾಷ್ಟ್ರವನ್ನಾಗಿ ರೂಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ‘ಆಪರೇಷನ್ ರೇಜ್ಪಿಲ್’ ಕಾರ್ಯಾಚರಣೆಯಡಿ ₹182 ಕೋಟಿ ಮೌಲ್ಯದ “ಜಿಹಾದಿ ಡ್ರಗ್” ಎಂದು ಕರೆಯಲ್ಪಡುವ ಕ್ಯಾಪ್ಟಗನ್ ಮಾದಕ ವಸ್ತುವನ್ನು ಮೊದಲ ಬಾರಿಗೆ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಧ್ಯಪ್ರಾಚ್ಯಕ್ಕೆ ಸಾಗಿಸಲಾಗುತ್ತಿದ್ದ ಈ ಮಾದಕ ವಸ್ತು ಸರಕನ್ನು ಭೇದಿಸಿ, ವಿದೇಶಿ ಪ್ರಜೆಯನ್ನು ಬಂಧಿಸಿರುವುದು ಮಾದಕ ವಸ್ತುಗಳ ವಿರುದ್ಧ ಸರ್ಕಾರ ಅನುಸರಿಸುತ್ತಿರುವ ಶೂನ್ಯ ಸಹಿಷ್ಣುತೆ ನೀತಿಯ ಪ್ರತಿಬಿಂಬವಾಗಿದೆ ಎಂದು ಹೇಳಿದ್ದಾರೆ.

ಭಾರತವನ್ನು ಸಾರಿಗೆ ಮಾರ್ಗವಾಗಿ ಬಳಸಿಕೊಂಡು ದೇಶಕ್ಕೆ ಪ್ರವೇಶಿಸುವ ಅಥವಾ ದೇಶದಿಂದ ಹೊರಹೋಗುವ ಪ್ರತಿಯೊಂದು ಗ್ರಾಂ ಮಾದಕ ವಸ್ತುವನ್ನೂ ನಿಗ್ರಹಿಸಲಾಗುವುದು ಎಂದು ಅಮಿತ್ ಶಾ ಪುನರುಚ್ಚರಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ ಎನ್ಸಿಬಿ ಅಧಿಕಾರಿಗಳ ಧೈರ್ಯ ಹಾಗೂ ಜಾಗರೂಕತೆಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande