ಸೋಫಿಯಾ ಮಸೀದಿಯಲ್ಲಿ ಬಲ್ದೋಟ ಕಂಪನಿಯಿಂದ ಉಚಿತ ಶುದ್ಧ ಕುಡಿಯುವ ನೀರಿನ ಆರ್ಓ ಘಟಕ
ಕೊಪ್ಪಳ, 16 ಮೇ (ಹಿ.ಸ.) : ಆ್ಯಂಕರ್ : ನೀರು ಜೀವಜಲ. ಮಾನವನ ಜೀವನದಲ್ಲಿ ನೀರಿನ ಮಹತ್ವ ಅಪ್ರಮೇಯವಾಗಿದ್ದು, ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವ ಜೊತೆಗೆ ಶುದ್ಧ ಕುಡಿಯುವ ನೀರಿನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶುದ್ಧ ನೀರಿನ ಲಭ್ಯತೆ ಅತ್ಯಂತ ಅವಶ್ಯಕವಾಗಿ
ಬಲ್ದೋಟ ಕಂಪನಿಯಿಂದ ಉಚಿತ ಶುದ್ಧ ಕುಡಿಯುವ ನೀರಿನ ಆರ್ಒ ಘಟಕ :ಸೋಫಿಯಾ ಮಸೀದಿಯಲ್ಲಿ


ಬಲ್ದೋಟ ಕಂಪನಿಯಿಂದ ಉಚಿತ ಶುದ್ಧ ಕುಡಿಯುವ ನೀರಿನ ಆರ್ಒ ಘಟಕ :ಸೋಫಿಯಾ ಮಸೀದಿಯಲ್ಲಿ


ಬಲ್ದೋಟ ಕಂಪನಿಯಿಂದ ಉಚಿತ ಶುದ್ಧ ಕುಡಿಯುವ ನೀರಿನ ಆರ್ಒ ಘಟಕ :ಸೋಫಿಯಾ ಮಸೀದಿಯಲ್ಲಿ


ಕೊಪ್ಪಳ, 16 ಮೇ (ಹಿ.ಸ.) :

ಆ್ಯಂಕರ್ : ನೀರು ಜೀವಜಲ. ಮಾನವನ ಜೀವನದಲ್ಲಿ ನೀರಿನ ಮಹತ್ವ ಅಪ್ರಮೇಯವಾಗಿದ್ದು, ಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸುವ ಜೊತೆಗೆ ಶುದ್ಧ ಕುಡಿಯುವ ನೀರಿನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶುದ್ಧ ನೀರಿನ ಲಭ್ಯತೆ ಅತ್ಯಂತ ಅವಶ್ಯಕವಾಗಿದೆ ಮತ್ತು ನಾವು ನಗರದಲ್ಲಿ ಪ್ಲಾಂಟೇಷನ್ ಮಾಡುವುದರ ಜೊತೆಗೆ ಪರಿಸರ ಕಾಪಾಡುವುದು ನಮೆಲ್ಲರ ಜವಾಬ್ದಾರಿ ಎಂದು ಎಂಎಸ್ಪಿಎಲ್ ಬಲ್ದೋಟ ಕಂಪನಿಯ ಸಿಎಸ್ಆರ್ ವಿಭಾಗದ ಉಪಾಧ್ಯಕ್ಷರಾದ ಎಚ್.ಕೆ. ರಮೇಶ್ ಅವರು ಅಭಿಪ್ರಾಯಪಟ್ಟರು.

ನಗರದ ಜವಾಹರ್ ರಸ್ತೆಯಲ್ಲಿರುವ ಯು ಸೋಫಿಯಾ ಮಸೀದಿ ಆವರಣದಲ್ಲಿ ಎಂಎಸ್ಪಿಎಲ್ ಪೆಲ್ಲೆಟ್ ಪ್ಲಾಂಟ್ (ಬಲ್ದೋಟ) ವತಿಯಿಂದ ಸುಮಾರು ರೂ. 1.5 ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಉಚಿತ ಶುದ್ಧ ಕುಡಿಯುವ ನೀರಿನ ಆರ್‌ಓ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅವರು ಮುಂದುವರೆದು, “ಕಂಪನಿಯ ಸಿಎಸ್ಆರ್ ಕಾರ್ಯಕ್ರಮಗಳ ಅಡಿಯಲ್ಲಿ ಸಮಾಜದ ಮೂಲಭೂತ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರು ಒದಗಿಸುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಈ ಘಟಕದಿಂದ ಮಸೀದಿಗೆ ಬರುವ ಭಕ್ತರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರಾದ ಆಸಿಫ್ ಅಲಿ ಅವರು, “ಇಂದಿನ ಕಾಲಘಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಬಹುಪಾಲು ಸ್ಥಳಗಳಲ್ಲಿ ಕಾಣಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಂಎಸ್ಪಿಎಲ್ ಬಲ್ದೋಟ ಸಂಸ್ಥೆಯವರು ಸಮಾಜದ ಅಗತ್ಯವನ್ನು ಅರಿತು ಮಸೀದಿ ಆವರಣದಲ್ಲಿ ಉಚಿತವಾಗಿ ಆರ್‌ಓ ಘಟಕವನ್ನು ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ. ಇಂತಹ ಕಾರ್ಯಗಳು ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜೊತೆಗೆ ಸಂಸ್ಥೆಯ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಎಂಎಸ್ಪಿಎಲ್ ಬಲ್ದೋಟ ಸಂಸ್ಥೆಯ ಸಿಎಸ್ಆರ್ ವಿಭಾಗದ ಉಪಾಧ್ಯಕ್ಷರಾದ ಎಚ್.ಕೆ. ರಮೇಶ್, ಎಜಿಎಂ ರವಿ ಬಸಗಪ್ಪಿ, ಶಾದಿ ಮಹಲ್ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಅಬ್ದುಲ್ ಅಜೀಜ್ ಚೌತಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಾಶು ಸಾಬ್ ಖತೀಬ್, ನಗರಸಭೆಯ ಮಾಜಿ ಸದಸ್ಯ ಅಕ್ಬರ್ ಪಾಷಾ ಪಲ್ಟನ್, ಸಮಾಜದ ಹಿರಿಯ ಮುಖಂಡರಾದ ಬಾಬಾ ಅರಗಂಜಿ, ಸೈಯದ್ ನಾಶಿರುದ್ದೀನ್ ಹುಸೇನಿ, ಯುವ ನಾಯಕ ಸಲೀಂ ಅಳವಂಡಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.

ಮಸೀದಿ ಸಮಿತಿ ಅಧ್ಯಕ್ಷರಾದ ಸೈಯದ್ ಯಜ್ದಾನಿ ಪಾಷಾ ಖಾದ್ರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, “ಮಸೀದಿಗೆ ದಿನನಿತ್ಯ ಆಗಮಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿರುವುದು ಅತ್ಯಂತ ಉಪಯುಕ್ತವಾಗಿದೆ. ಈ ಸಮಾಜಮುಖಿ ಕಾರ್ಯಕ್ಕಾಗಿ ಎಂಎಸ್ಪಿಎಲ್ ಬಲ್ದೋಟ ಸಂಸ್ಥೆಗೆ ಮಸೀದಿ ಆಡಳಿತ ಮಂಡಳಿ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಘಟಕ ಅಳವಡಿಕೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರತಿನಿಧಿಗಳಾದ ಬಸವಪ್ರಭು ಪಾಟೀಲ್, ಶ್ರೀನಿವಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಕಾರ್ಯಕ್ರಮವು ಸಮಾಜದ ವಿವಿಧ ವರ್ಗಗಳ ಜನರ ಸಕ್ರಿಯ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande