ರೈತರಿಗೆ ಆಧುನಿಕ ಕುರಿ ಸಾಕಾಣಿಕೆ ತರಬೇತಿ
ದಾವಣಗೆರೆ, 15 ಮೇ (ಹಿ.ಸ.) : ಆ್ಯಂಕರ್ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರೈತರಿಗಾಗಿ ಎರಡು ದಿನಗಳ “ಆಧುನಿಕ ಕುರಿ ಸಾಕಾಣಿಕೆ” ತರಬೇತಿ ಕಾರ್ಯಕ್ರಮವನ್ನು ಮೇ 18 ಮತ್ತು 19ರಂದು ಆಯೋಜಿಸಲಾಗಿದೆ. ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಜಿಲ್ಲಾ ಪಶು ಆಸ್ಪತ್ರೆ ಆವರಣದ ಪಶುಪಾಲನಾ
ರೈತರಿಗೆ ಆಧುನಿಕ ಕುರಿ ಸಾಕಾಣಿಕೆ ತರಬೇತಿ


ದಾವಣಗೆರೆ, 15 ಮೇ (ಹಿ.ಸ.) :

ಆ್ಯಂಕರ್ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರೈತರಿಗಾಗಿ ಎರಡು ದಿನಗಳ “ಆಧುನಿಕ ಕುರಿ ಸಾಕಾಣಿಕೆ” ತರಬೇತಿ ಕಾರ್ಯಕ್ರಮವನ್ನು ಮೇ 18 ಮತ್ತು 19ರಂದು ಆಯೋಜಿಸಲಾಗಿದೆ.

ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಜಿಲ್ಲಾ ಪಶು ಆಸ್ಪತ್ರೆ ಆವರಣದ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಈ ತರಬೇತಿ ನಡೆಯಲಿದೆ.

ತರಬೇತಿಗೆ ಆಗಮಿಸುವ ರೈತರು ಆಧಾರ್ ಕಾರ್ಡ್ ಪ್ರತಿ, ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ತರಬೇಕು ಎಂದು ಇಲಾಖೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಆಸಕ್ತ ರೈತರು ಪಶುವೈದ್ಯಕೀಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂರವಾಣಿ ಸಂಖ್ಯೆ 08192-233787 ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande