ವಿಜಯಪುರದಲ್ಲಿ ಬಾಂಬ್ ಸ್ಫೋಟ ಅಣುಕು ಪ್ರದರ್ಶನ
ವಿಜಯಪುರ, 15 ಮೇ (ಹಿ.ಸ.) : ಆಂಕರ್ : ವಿಜಯಪುರ ನಗರದಲ್ಲಿ ಬಾಂಬ್ ಸ್ಫೋಟದಂತಹ ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ರಕ್ಷಣಾ ಸಿಬ್ಬಂದಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆ ಆವರಣದಲ್ಲ
ಆಗ್ನಿ


ವಿಜಯಪುರ, 15 ಮೇ (ಹಿ.ಸ.) :

ಆಂಕರ್ : ವಿಜಯಪುರ ನಗರದಲ್ಲಿ ಬಾಂಬ್ ಸ್ಫೋಟದಂತಹ ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ರಕ್ಷಣಾ ಸಿಬ್ಬಂದಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆ ಆವರಣದಲ್ಲಿ ಭವ್ಯ ಅಣುಕು ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಗೃಹರಕ್ಷಕ ದಳ, ಬಿ.ಎಲ್.ಡಿ.ಇ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ತಂಡ ಹಾಗೂ ಎನ್.ಎನ್.ಸಿ ಘಟಕಗಳ ಸಹಯೋಗದಲ್ಲಿ ಈ ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು. ನಗರ ಪ್ರದೇಶದಲ್ಲಿ ಬಾಂಬ್ ಬ್ಲಾಸ್ಟ್ ಸಂಭವಿಸಿದರೆ ತಕ್ಷಣ ಕೈಗೊಳ್ಳಬೇಕಾದ ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳ ಪ್ರಾಥಮಿಕ ಚಿಕಿತ್ಸೆ ಹಾಗೂ ಸಾರ್ವಜನಿಕರ ಸುರಕ್ಷತೆ ಕುರಿತಂತೆ ಪ್ರಾಯೋಗಿಕವಾಗಿ ಪ್ರದರ್ಶನ ನೀಡಲಾಯಿತು.

ಗಾಯಾಳುಗಳ ವರ್ಗೀಕರಣ ಕುರಿತು ಪ್ರಾಯೋಗಿಕ ಮಾಹಿತಿ

ಅಣುಕು ಪ್ರದರ್ಶನದಲ್ಲಿ ಸ್ಫೋಟದ ಬಳಿಕ ಗಾಯಗೊಂಡವರನ್ನು ಪರಿಸ್ಥಿತಿಯ ಗಂಭೀರತೆಯ ಆಧಾರದ ಮೇಲೆ ಬಣ್ಣಗಳ ಮೂಲಕ ಗುರುತಿಸುವ ವಿಧಾನವನ್ನು ವಿವರಿಸಲಾಯಿತು.

ಕಪ್ಪು ಬಣ್ಣ – ಮೃತಪಟ್ಟವರ ಗುರುತು

ಕೆಂಪು ಬಣ್ಣ – ತೀವ್ರ ಗಾಯಗೊಂಡವರು

ಹಳದಿ ಬಣ್ಣ – ಸಾಮಾನ್ಯ ಗಾಯಗೊಂಡವರು

ಹಸಿರು ಬಣ್ಣ – ಅಪಾಯದಿಂದ ಪಾರಾದವರು

ಈ ವಿಧಾನದಿಂದ ರಕ್ಷಣಾ ಸಿಬ್ಬಂದಿಗೆ ತುರ್ತು ಪರಿಸ್ಥಿತಿಯಲ್ಲಿ ಗಾಯಾಳುಗಳಿಗೆ ಆದ್ಯತೆ ಆಧಾರಿತ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂಬುದನ್ನು ವೈದ್ಯಕೀಯ ತಂಡ ತಿಳಿಸಿತು.

ಸಿಲುಕಿದವರ ರಕ್ಷಣೆ ಕುರಿತು ಪ್ರದರ್ಶನ

ಬಾಂಬ್ ಸ್ಫೋಟದ ಸಂದರ್ಭ ಕಟ್ಟಡಗಳೊಳಗೆ ಸಿಲುಕಿಕೊಂಡಿರುವ ಜನರನ್ನು ಹೇಗೆ ಸುರಕ್ಷಿತವಾಗಿ ಹೊರತೆಗೆದು ಪ್ರಾಥಮಿಕ ಚಿಕಿತ್ಸೆ ನೀಡಬೇಕು ಎಂಬುದನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ವೈದ್ಯಕೀಯ ತಂಡಗಳು ಅಣುಕು ಪ್ರದರ್ಶನದ ಮೂಲಕ ತೋರಿಸಿಕೊಟ್ಟವು. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಹೇಗೆ ವೇಗವಾಗಿ ನಡೆಯಬೇಕು, ಸಾರ್ವಜನಿಕರು ಹೇಗೆ ಸಹಕರಿಸಬೇಕು ಎಂಬುದರ ಕುರಿತು ಸಹ ಮಾಹಿತಿ ನೀಡಲಾಯಿತು.

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಕಾರ್ಯಕ್ರಮ ಈ ಕಾರ್ಯಕ್ರಮದ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಗಾಬರಿಗೊಳ್ಳದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು, ರಕ್ಷಣಾ ಸಿಬ್ಬಂದಿಗೆ ಸಹಕರಿಸಬೇಕು ಹಾಗೂ ಗಾಯಾಳುಗಳಿಗೆ ತಕ್ಷಣ ನೆರವಾಗುವ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಹಲವು ಇಲಾಖೆಗಳ ಅಧಿಕಾರಿಗಳು ಭಾಗಿ

ಅಣುಕು ಪ್ರದರ್ಶನದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ ನೀಲಗರ್, ಅಗ್ನಿಶಾಮಕ ಠಾಣಾಧಿಕಾರಿ ಉಮೇಶ ತಳಕೇರಿ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಅಶೋಕ ಜಡ್ಡೆನ್ನವರ, ಅಶೋಕ ರಾಠೋಡ, ಗೃಹರಕ್ಷಕ ದಳದ ಕಮಾಂಡೆಂಟ್ ಶಿವಾನಂದ ಶಿವೂರ, ಡೆಪ್ಯೂಟಿ ಕಮಾಂಡೆಂಟ್ ಮಹಾದೇವ ಪೂಜಾರ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ಇದೇ ವೇಳೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಡೀನ್ ಹಾಗೂ ಪ್ರಾಚಾರ್ಯರಾದ ಡಾ. ತೇಜಸ್ವಿನಿ ವಲ್ಲಭ, ಉಪ ಪ್ರಾಚಾರ್ಯ ಡಾ. ವಿಜಯಕುಮಾರ ಟಿ.ಕೆ., ಡಾ. ಆನಂದ ಅಂಬಲಿ, ಡಾ. ಎನ್.ಎಸ್. ಬೆಂತೂರ, ಡಾ. ರವಿಕುಮಾರ ಬಿರಾದಾರ, ಡಾ. ಐ.ಎಸ್. ಧಾರವಾಡಕರ, ಡಾ. ಎಸ್.ಎಸ್. ಕಟ್ಟಿ, ಡಾ. ವಿನೋದ ಜಾಧವ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಹಾಗೂ ಎನ್.ಎನ್.ಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ನಗರದ ಸುರಕ್ಷತೆ ಹಾಗೂ ತುರ್ತು ನಿರ್ವಹಣೆಯಲ್ಲಿ ಜನಸಾಮಾನ್ಯರ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಈ ಅಣುಕು ಪ್ರದರ್ಶನ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಟ್ಟಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande