ಕೊಪ್ಪಳ : ಕಾಳಿದಾಸ ಪದವಿ ಕಾಲೇಜು ಆರಂಭ
ಕೊಪ್ಪಳ, 15 ಮೇ (ಹಿ.ಸ.) : ಆ್ಯಂಕರ್ : ನಗರದ ಕುಷ್ಟಗಿ ರಸ್ತೆಯ ಪಕ್ಕದಲ್ಲಿರುವ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ 2026-27 ನೇ ಶೈಕ್ಷಣಿಕ ವರ್ಷದಿಂದ ಪದವಿ ಕಾಲೇಜು ಆರಂಭವಾಗಲಿದೆ. ಇದಕ್ಕಾಗಿ ನೂತನ ಕಟ್ಟಡ ನಿರ್ಮಾಣವಾಗಿದ್ದು ಕಟ್ಟಡ ವಾಸ್ತು ಶಾಂತಿ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಳಿದಾಸ ಶಿಕ್
ಕೊಪ್ಪಳ : ಕಾಳಿದಾಸ ಪದವಿ ಕಾಲೇಜು ಆರಂಭ


ಕೊಪ್ಪಳ, 15 ಮೇ (ಹಿ.ಸ.) :

ಆ್ಯಂಕರ್ : ನಗರದ ಕುಷ್ಟಗಿ ರಸ್ತೆಯ ಪಕ್ಕದಲ್ಲಿರುವ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ 2026-27 ನೇ ಶೈಕ್ಷಣಿಕ ವರ್ಷದಿಂದ ಪದವಿ ಕಾಲೇಜು ಆರಂಭವಾಗಲಿದೆ. ಇದಕ್ಕಾಗಿ ನೂತನ ಕಟ್ಟಡ ನಿರ್ಮಾಣವಾಗಿದ್ದು ಕಟ್ಟಡ ವಾಸ್ತು ಶಾಂತಿ ಪೂಜೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಳಿದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಸವರಾಜ ಹಿಟ್ನಾಳ್ ಮಾತನಾಡಿ, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗಾಗಿ ಪದವಿ ಕಾಲೇಜು ಆರಂಭವಾಗಿದೆ. ಇದೇ ಶೈಕ್ಷಣಿಕ ವರ್ಷದಿಂದ ಬಿಎ, ಬಿಎಸ್ಸಿ, ಬಿಕಾಂ ಕೋರ್ಸ್ ಗಳನ್ನು ಆರಂಭವಾಗಲಿದ್ದು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾಳಿದಾಸ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಸಹಕಾರದಿಂದ ವಿಶಾಲವಾದ ಬೃಹತ್ ಕಟ್ಟಡ ನಿರ್ಮಾಣವಾಗಿದ್ದು, ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಶುದ್ಧ ಕುಡಿಯುವ ನೀರು, ಹೈಟೆಕ್ ಶೌಚಾಲಯ, ಗ್ರಂಥಾಲಯ, ಸಿಸಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರ ರಾಘವೇಂದ್ರ ಹಿಟ್ನಾಳ, ಸಂಸ್ಥೆ ಉಪಾಧ್ಯಕ್ಷ ಮಂಜುನಾಥ್ ಅಂಗಡಿ, ನಿರ್ದೇಶಕರಾದ ಹನುಮೇಶ್ ಮುರುಡಿ, ಅಮರೇಶ್ ಉಪಲಾಪುರ, ದ್ಯಾಮಣ್ಣ ಚಿಲವಾಡಗಿ, ಜಗದೀಶ್ ಕರ್ಕಿಹಳ್ಳಿ, ರಾಮಣ್ಣ ಹಳ್ಳಿಗುಡಿ, ಸೋಮಣ್ಣ ಬೈರಣ್ಣವರ, ಆಡಳಿತಾಧಿಕಾರಿ ರವಿಕುಮಾರ್ ಗೋಡಿ, ಮುಖಂಡರಾದ ಕೃಷ್ಣಾರೆಡ್ಡಿ ಗಲಬಿ, ದ್ಯಾಮಣ್ಣ ಕರಿಗಾರ್, ಗ್ಯಾನಪ್ಪ ತಳಕಲ್, ಕುಬೇರ ಮಜ್ಜಿಗಿ, ಆನಂದ ಕಿನ್ನಾಳ, ಗವಿಸಿದ್ದಪ್ಪ ಹುಳ್ಳಿ, ಗೋವಿಂದ ಚೌಡಕಿ, ಗವಿಸಿದ್ದಪ್ಪ ಪೂಜಾರ, ಶ್ರೀಧರ ಕುರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande