ನಾಳೆ ವಿದ್ಯುತ್ ಗ್ರಾಹಕರ ಸಂವಾದ ಸಭೆ
ಮುನಿರಾಬಾದ್, 15 ಮೇ (ಹಿ.ಸ.) ಆ್ಯಂಕರ್ : ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಛೇರಿ ಆವರಣದಲ್ಲಿ ನಾಳೆ ಬೆಳಿಗ್ಗೆ 11ಗಂಟೆಗೆ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಏರ್ಪಡಿಸಲಾಗಿದೆ. ಮುನಿರಾಬಾದ್ ಉಪ ವಿಭಾಗ ವ್ಯಾಪ್ತಿಯ ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ ವಿ
ನಾಳೆ ವಿದ್ಯುತ್ ಗ್ರಾಹಕರ ಸಂವಾದ ಸಭೆ


ಮುನಿರಾಬಾದ್, 15 ಮೇ (ಹಿ.ಸ.)

ಆ್ಯಂಕರ್ : ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಛೇರಿ ಆವರಣದಲ್ಲಿ ನಾಳೆ ಬೆಳಿಗ್ಗೆ 11ಗಂಟೆಗೆ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಏರ್ಪಡಿಸಲಾಗಿದೆ.

ಮುನಿರಾಬಾದ್ ಉಪ ವಿಭಾಗ ವ್ಯಾಪ್ತಿಯ ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಪಂಚಾಯತ್ಗಳಾದ ಮುನಿರಾಬಾದ್, ಹುಲಿಗಿ, ಹಿಟ್ನಾಳ, ಅಗಳಕೇರಾ, ಶಿವಪುರ, ಗಿಣಿಗೇರಾ, ಹಿರೇಬಗನಾಳ, ಕುಣಿಕೇರಾ, ಕಲ್ತಾವರಗೇರಾ, ಬಂಡಿಹರ್ಲಾಪುರ, ಬೂದುಗುಂಪಾ, ಗುಳದಳ್ಳಿ, ಬೇವಿನಹಳ್ಳಿ, ಇಂದರಗಿ, ಹೊಸಳ್ಳಿ ಹಾಗೂ ವನ ಬಳ್ಳಾರಿಯ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ವಿದ್ಯುತ್ ಗ್ರಾಹಕರ ಸಂವಾದ ಸಭೆಗೆ ಹಾಜರಾಗಿ ಸದುಪಯೋಗ ಪಡೆದುಕೊಳ್ಳುವಂತೆ ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ ವಿಭಾಗ ಕಛೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande