ಟಣಕನಕಲ್ ಐಟಿಐ : ಮೇ 19 ರಂದು ಶಿಶಿಕ್ಷು ತರಬೇತಿ ಸಂದರ್ಶನ
ಕೊಪ್ಪಳ, 13 ಮೇ (ಹಿ.ಸ.) : ಆ್ಯಂಕರ್ : ಟಣಕನಕಲ್ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 19 ರಂದು ಬೆಳಿಗ್ಗೆ 9 ಗಂಟೆಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಬಿಡದಿ-ಬೆಂಗಳೂರು ಅವರ ವತಿಯಿಂದ ಐಟಿಐ ಪಾಸ್ ಆದ ಹಾಗೂ ಪ್ರಸ್ತುತ ಐಟಿಐ ಎರಡನೇ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿ
ಟಣಕನಕಲ್ ಐಟಿಐ : ಮೇ 19 ರಂದು ಶಿಶಿಕ್ಷು ತರಬೇತಿ ಸಂದರ್ಶನ


ಕೊಪ್ಪಳ, 13 ಮೇ (ಹಿ.ಸ.) :

ಆ್ಯಂಕರ್ : ಟಣಕನಕಲ್ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 19 ರಂದು ಬೆಳಿಗ್ಗೆ 9 ಗಂಟೆಗೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಬಿಡದಿ-ಬೆಂಗಳೂರು ಅವರ ವತಿಯಿಂದ ಐಟಿಐ ಪಾಸ್ ಆದ ಹಾಗೂ ಪ್ರಸ್ತುತ ಐಟಿಐ ಎರಡನೇ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಸಂದರ್ಶನವನ್ನು ಟಣಕನಕಲ್ ಸಂಸ್ಥೆಯಲ್ಲಿ ಮಾತ್ರ ನಡೆಸುತ್ತಿರುವುದರಿಂದ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಾರ್ಥಿಗಳು ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದೆ. ಆಸಕ್ತರು ಆಸಕ್ತರು ತಮ್ಮ ಆಧಾರ್ ಕಾರ್ಡ, ಫೋಟೋ, ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳ ಜೊತೆಗೆ 2 ಸೆಟ್ ಝೆರಾಕ್ಸ್ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ (ಟಣಕನಕಲ್, ಕುಷ್ಟಗಿ ರಸ್ತೆ, ಕೊಪ್ಪಳ). ಮೊಬೈಲ್ ಸಂ:- 9449330436, 9448813422, 9945577155, 9742532353, 9945672606, & 9964780198 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande