

ಬಳ್ಳಾರಿ, 13 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜೂನ್ ತಿಂಗಳ ಒಂದನೇ ತಾರೀಕಿನಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಢಾಯ ಮಾಡಿರುವ ಕಾರಣ ಸಂಚಾರ ಪೊಲೀಸರು ಶಿಕ್ಷಣ ಸಂಸ್ಥೆಗಳು, ಫ್ಯಾಕ್ಟರಿಗಳು, ಕಾರ್ಪೊರೇಟ್ ಸಂಸ್ಥೆಗಳಿಗೆ ಭೇಟಿ ನೀಡಿ, ಹೆಲ್ಮೆಟ್ ಬಳಕೆಯ ಅನುಕೂಲಗಳು, ಕಾನೂನಿನ ಬೆಂಬಲದ ಕುರಿತು ಮಾಹಿತಿ ನೀಡುತ್ತಿದ್ದಾರೆ.
ಸಂಚಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಪೆಕ್ಟರ್ ರುದ್ರಪ್ಪ ಅವರ ನೇತೃತ್ವದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಿವಿಧೆಡೆ ಸಂಚರಿಸಿ, ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿಯ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಗಳ ಜೊತೆಯಲ್ಲಿ ಹೆಲ್ಮೆಟ್ ಬಳಕೆಯ ಅನುಕೂಲಗಳು ಮತ್ತು ಕಾನೂನಿನ ಬೆಂಬಲ, ಆರೋಗ್ಯ - ದೈಹಿಕ ಸುರಕ್ಷತೆ, ಕುಟುಂಬದ ನಿರ್ವಹಣೆ, ಪೋಷಕರ ನೆಮ್ಮದಿಗಳ ಕುರಿತು ಆಪ್ತ ಸಮಾಲೋಚನೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್