
ಬಳ್ಳಾರಿ, 13 ಮೇ (ಹಿ.ಸ.) :
ಆ್ಯಂಕರ್ : ಶ್ರೀ ಗುರು ಸಾರ್ವಭೌಮ ಸಂಸ್ಕøತ ವಿದ್ಯಾಪೀಠ ಮಂತ್ರಾಲಯ ಹಾಗೂ ರಾಯಚೂರುನ 2026-27ನೇ ಸಾಲಿನ ವಿದ್ಯಾಪೀಠದ ಪ್ರವೇಶ ಜೂ.15 ರಿಂದ ತರಗತಿಗಳು ಪುನಃ ಪ್ರಾರಂಭವಾಗಲಿವೆ ಎಂದು ಬಳ್ಳಾರಿಯ ಶ್ರೀ ರಾಘವೇಂದ್ರ ಸ್ವಾಮಿ ಶ್ರೀಮಠದ ಆಡಳಿತಾಧಿಕಾರಿ ಪಂ. ಪ್ರಸನ್ನಾಚಾರ ಅವರು ತಿಳಿಸಿದ್ದಾರೆ.
8 ವರ್ಷ ಮೇಲ್ಪಟ್ಟ ತ್ರಿಮತಸ್ಥ ಬ್ರಾಹ್ಮಣ ವಟುಗಳಿಗೆ ಉಚಿತ ಲೌಕಿಕ ಶಿಕ್ಷಣ ಜೊತೆಗೆ, ಭೋಜನ ವ್ಯವಸ್ಥೆ, ಬಟ್ಟೆ, ವಸತಿ ಸಂಪೂರ್ಣ ಉಚಿತ. ಅನುಮತಿ ಪಡೆದ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ಪ್ರಥಮ, ಕಾವ್ಯ, ಸಾಹಿತ್ಯ, ಬಿ.ಎ., ಎಂ.ಎ. ಪರೀಕ್ಷೆಗಳನ್ನು ವಿದ್ಯಾಲಯದಲ್ಲಿ ನಡೆಸಲಾಗುವುದು. ವೇದ, ಕಾವ್ಯ, ಸಾಹಿತ್ಯ, ವ್ಯಾಕರಣ, ತರ್ಕ, ವೇದಾಂತ, ಪೌರಹಿತ್ಯ, ಜೋತಿಷ್ಯ ಶಾಸ್ತ್ರಗಳ ಅಧ್ಯಯನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
2026-27ನೇ ಸಾಲಿನ ವಿದ್ಯಾಪೀಠದ ಪ್ರವೇಶಗಳು ಪ್ರಾರಂಭವಾಗಿದ್ದು, ಜೂ.15 ರಿಂದ ವಿದ್ಯಾಪೀಠದ ತರಗತಿಗಳು ಪ್ರಾರಂಭವಾಗಿವೆ. ಆಸಕ್ತರು, ಹೆಚ್ಚಿನ ಮಾಹಿತಿಗಾಗಿ ಡಾ. ಎನ್. ವಾದಿರಾಜಾಚಾರ್ಯ 9492570190, ವಿ.ಎನ್. ಆರ್. ದ್ವಾರಕನಾಥಾಚಾರ್ಯ 9740637824, ರಾಮಚಂದ್ರ ಆಚಾರ್ಯ ರಿತ್ತಿ 9900507154, ವಿ. ಪವನಾಚಾರ್ಯ 7019717706 ಅವರನ್ನು ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್