ಕಾರ್ಮಿಕ ಇಲಾಖೆಯಿಂದ ನಾನಾ ಸೌಲಭ್ಯ ಲಭ್ಯ : ಕಾರ್ಮಿಕ ಅಧಿಕಾರಿ ಆರತಿ
ರಾಯಚೂರು , 12 ಮೇ (ಹಿ.ಸ.) : ಆ್ಯಂಕರ್ : ಕಾರ್ಮಿಕ ಇಲಾಖೆಯು ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆ ಮತ್ತು ಕೈಗಾರಿಕಾ ಶಾಂತಿಯನ್ನು ಕಾಪಾಡುವ ಪ್ರಮುಖ ಸರ್ಕಾರಿ ಸಂಸ್ಥೆಯಾಗಿದೆ. ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕರ ಹಕ್ಕುಗಳ ರಕ್ಷಣೆ, ಕನಿಷ್ಠ ವೇತನ ಜಾರಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಕ
ಕಾರ್ಮಿಕ ಇಲಾಖೆಯಿಂದ ನಾನಾ ಸೌಲಭ್ಯ ಲಭ್ಯ : ಕಾರ್ಮಿಕ ಅಧಿಕಾರಿ ಆರತಿ


ರಾಯಚೂರು , 12 ಮೇ (ಹಿ.ಸ.) :

ಆ್ಯಂಕರ್ : ಕಾರ್ಮಿಕ ಇಲಾಖೆಯು ಕಾರ್ಮಿಕರ ಕಲ್ಯಾಣ, ಸಾಮಾಜಿಕ ಭದ್ರತೆ ಮತ್ತು ಕೈಗಾರಿಕಾ ಶಾಂತಿಯನ್ನು ಕಾಪಾಡುವ ಪ್ರಮುಖ ಸರ್ಕಾರಿ ಸಂಸ್ಥೆಯಾಗಿದೆ. ಅಸಂಘಟಿತ ಮತ್ತು ಸಂಘಟಿತ ಕಾರ್ಮಿಕರ ಹಕ್ಕುಗಳ ರಕ್ಷಣೆ, ಕನಿಷ್ಠ ವೇತನ ಜಾರಿ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಕಾರ್ಮಿಕ ಕಾಯ್ದೆಗಳ ಅನುμÁ್ಠನವನ್ನು ನಿರ್ವಹಿಸುತ್ತಿದ್ದು, ಕಾರ್ಮಿಕರು ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ನೋಂದಣಿ ಮತ್ತು ನಾನಾ ಸೇವೆಗಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಆರತಿ ಅವರು ತಿಳಿಸಿದ್ದಾರೆ.

ಯೋಜನೆಗಳು, ಸೌಲಭ್ಯಗಳು:

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 18 ರಿಂದ 60 ವರ್ಷದೊಳಗಿರುವ ಕಳೆದ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳ ಕೆಲಸ ನಿರ್ವಹಿಸಿರಬೇಕು. ನೋಂದಣಿ ಶುಲ್ಕ 100 ರೂಪಾಯಿ ಹಾಗೂ ನವೀಕರಣ ಶುಲ್ಕ 50ರೂ. ಶೈಕ್ಷಣಿಕ ಧನಸಹಾಯ, ಮದುವೆ ಧನಸಹಾಯ, ವೈದ್ಯಕೀಯ ಧನಸಹಾಯ, ಪ್ರಮುಖ ವೈದ್ಯಕೀಯ ಧನ ಸಹಾಯ, ಹೆರಿಗೆ ಸೌಲಭ್ಯ, ತಾಯಿ ಮಗು ಸಹಾಯ ಹಸ್ತ, ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹರಾಶಿ ಪರಿಹಾರ, ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಣಿ ಸೌಲಭ್ಯ, ಅಪಘಾತ ಪರಿಹಾರ, ಟೂಲ್ ಕಿಟ್ ಸೌಲಭ್ಯ, ಶ್ರಮಿಕ ಸಂಜೀವಿನಿ ಸಂಚಾರಿ ಚಿಕಿತ್ಸಾಲಯ ಪಡೆಯಬಹುದಾಗಿದೆ. ವಿವಿಧ ಸೌಲಭ್ಯಗಳ ಅರ್ಜಿ ಸಲ್ಲಿಸುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.

ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ: ಯೋಜನೆಗೆ ಅರ್ಹ ಅಭ್ಯರ್ಥಿಗಳು 18 ರಿಂದ 60 ವರ್ಷದೊಳಗಿರಬೇಕು. ಪ್ರಸ್ತುತ 101 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಅನ್ವಯಿಸುತ್ತದೆ. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಎಸ್.ಐ ಮತ್ತು ಇ,ಪಿ.ಎಫ್ ಸೌಲಭ್ಯ ಹೊಂದಿರಬಾರದು. ಇವರಿಗೆ ನೋಂದಣಿ ಹಾಗೂ ನವೀಕರಣ ಶುಲ್ಕ ಉಚಿತವಾಗಿದೆ.

ಕರ್ನಾಟಕ ರಾಜ್ಯ ಮೋಟರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ: ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಎಸ್.ಐ ಮತ್ತು ಇ.ಪಿ.ಎಫ್ ಫಲಾನುಭವಿಗಳಾಗಿರಬಾರದು. ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಲಭ್ಯವಾಗುತ್ತದೆ ನೋಂದಣಿ ಹಾಗೂ ನವೀಕರಣ ಶುಲ್ಕ 50ರೂ. ಆಗಿದೆ. ಸೌಲಭ್ಯಗಳ ಅರ್ಜಿ ಸಲ್ಲಿಸುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.

ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ: ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಎಸ್.ಐ ಮತ್ತು ಇ.ಪಿ.ಎಫ್ ಫಲಾನುಭವಿಗಳಾಗಿರಬಾರದು. ಕರ್ನಾಟಕದಲ್ಲಿ ಗಿಗ್ ವೃತ್ತಿ(ಡೆಲಿವರಿ) ನಿರ್ವಹಿಸುತ್ತಿರುವವರಿಗೆ ಮಾತ್ರ ನೋಂದಣಿ ಹಾಗೂ ನವೀಕರಣ ಶುಲ್ಕ ಉಚಿತವಾಗಿದೆ. ಸೌಲಭ್ಯಗಳ ಅರ್ಜಿ ಸಲ್ಲಿಸುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.

ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ: ವಯೋಮಿತಿ 18 ರಿಂದ 59 ವರ್ಷದೊಳಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಎಸ್.ಐ ಮತ್ತು ಇ.ಪಿ.ಎಫ್ ಫಲಾನುಭವಿಗಳಾಗಿರಬಾರದು ನೋಂದಣಿ ಹಾಗೂ ನವೀಕರಣ ಶುಲ್ಕ ಉಚಿತವಾಗಿದೆ. ಸೌಲಭ್ಯಗಳ ಅರ್ಜಿ ಸಲ್ಲಿಸುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.

ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆ: ಯೋಜನೆಯಡಿ 18 ರಿಂದ 40 ವರ್ಷದೊಳಗಿರಬೇಕು. ಮಾಸಿಕ ಆದಾಯ 15,000 ರೂ. ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು.

ಇ.ಎಸ್.ಐ/ಇ.ಪಿ.ಎಫ್/ಎನ್.ಪಿ.ಎಸ್ ಯೋಜನೆಯ ಫಲಾನುಭವಿಗಳಾಗಿರಬಾರದು ವಯಸ್ಸಿನ ಆಧಾರಿತ ಮಾಸಿಕ ವಂತಿಕೆಯನ್ನು ಪಾವತಿಸಿದ ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ನಿಶ್ಚಿತ 3000 ರೂ.ಗಳ ಪಿಂಚಣಿ ಸೌಲಭ್ಯ ದೊರೆಯುತ್ತದೆ. (ವಯೋಮಿತಿ ಆದಾರದ 55 ರಿಂದ 200 ರೂಪಾಯಿ) ಸೌಲಭ್ಯಗಳ ಅರ್ಜಿ ಸಲ್ಲಿಸುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.

ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ: 18 ರಿಂದ 40 ವರ್ಷದೊಳಗಿರಬೇಕು. ವಾರ್ಷಿಕ ವಹಿವಾಟು ಗರಿಷ್ಠ 1.50 ಕೋಟಿ ರೂ.ಗಳ ಒಳಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಎಸ್.ಐ/ ಇ.ಪಿ.ಎಫ್/ ಎನ್.ಪಿ.ಎಸ್/ಪಿಎಂಎಸ್ವೈಎಂ/ ಪಿ.ಎಂ.ಕೆ.ಎಂ.ವೈ. ಯೋಜನೆಯ ಫಲಾನುಭವಿಗಳಾಗಿರಬಾರದು. (ವಯೋಮಿತಿ ಆದಾರದ 55 ರಿಂದ 200 ರೂಪಾಯಿ) ವಯಸ್ಸಿನ ಆಧಾರಿತ ಮಾಸಿಕ ವಂತಿಕೆಯನ್ನು ಪಾವತಿಸಿದ ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ನಿಶ್ಚಿತ 3000ರೂ.ಗಳ ಪಿಂಚಣಿ ಸೌಲಭ್ಯ ದೊರೆಯುತ್ತದೆ. ಸೌಲಭ್ಯಗಳ ಅರ್ಜಿ ಸಲ್ಲಿಸುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.

ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಮ್ ಯೋಜನೆ: 16 ರಿಂದ 59 ವಯೋಮಾನದವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರದವರು ಈ ಯೋಜನೆಗೆ ಒಳಪಡಬಹುದಾಗಿದೆ.

ಪ್ರಸ್ತುತ ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಪ್ರಯೋಜನ ಪಡೆಯಬಹುದು (ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ 2 ಲಕ್ಷ ರೂ. ಹಾಗೂ ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ಪರಿಹಾರವು ಯೋಜನೆಯಡಿ ಇರುತ್ತದೆ. ನೋಂದಣಿ ಹಾಗೂ ನವೀಕರಣ ಶುಲ್ಕ ಉಚಿತವಾಗಿದೆ. ಸೌಲಭ್ಯಗಳ ಅರ್ಜಿ ಸಲ್ಲಿಸುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ.

ಕರ್ನಾಟಕ ರಾಜ್ಯ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ (ಆಶಾದೀಪ) ಸೊಸೈಟಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವುದುನ್ನು ಉತ್ತೇಜಿಸಲು, ನೇಮಕಾತಿ ಮಾಡಿಕೊಂಡ ಸಂಸ್ಥೆಗೆ ಅಂತಹ ನೌಕರರ ಇ.ಎಸ್.ಐ ಹಾಗೂ ಇ.ಪಿ.ಎಫ್ ವಂತಿಕೆಯನ್ನು ಮರುಪಾವತಿಸುವ ಮೂಲಕ ಆರ್ಥಿಕ ಸಹಾಯ ನೀಡುವುದು ತರಬೇತಿ ಪಡೆಯುವ ಅಪ್ರೆಂಟಿಸ್ಗಳಿಗೆ ನೀಡಿದ ಶಿಷ್ಯ ವೇತನವನ್ನು ಮಾಲೀಕರಿಗೆ ಮರು ಪಾವತಿಸುವುದು ಮಾಲೀಕರು ಪಾವತಿಸುವ ಇ.ಎಸ್.ಐ ಮತ್ತು ಇ.ಪಿ.ಎಫ್ ವಂತಿಕೆ ಮರುಪಾವತಿ, ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ, ಅಪ್ರೆಂಟಿಸ್ ತರಬೇತಿ ನಂತರ ಖಾಯಂ ಮಾಡಿಕೊಂಡಲ್ಲಿ ವೇತನ ಮರು ಪಾವತಿ, ಹೊಸದಾಗಿ ಕಾಯಂ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳ ವೇತನ ಮರು ಪಾವತಿ ಯೋಜನೆಗಳು ಇರುತ್ತದೆ. ನೋಂದಣಿ ಹಾಗೂ ನವೀಕರಣ ಶುಲ್ಕ ಉಚಿತವಾಗಿದೆ. ಸೌಲಭ್ಯಗಳ ಅರ್ಜಿ ಸಲ್ಲಿಸುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ರಾಯಚೂರು ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಅವರು ತಿಳಿಸಿದ್ದಾರೆ

ನಾನಾ

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande