ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಬೇಸಿಗೆ ಶಿಬಿರ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಬೇಸಿಗೆ ಶಿಬಿರ
ಕೋಲಾರ ತಾಲ್ಲೂಕಿನ ನರಸಾಪುರದಲ್ಲಿ ನಡೆದ ಬೇಸಿಗೆ ಶಿಬಿರವನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಜಿ.ಶ್ರೀನಿವಾಸ್ ಉದ್ಘಾಟಿಸಿದರು.


ಕೋಲಾರ, ಮೇ ೧೨ (ಹಿ.ಸ) :

ಆ್ಯಂಕರ್ : ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಬರಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿದೆ. ಇಂತಹ ವೇದಿಕೆಗಳ ಸದುಪಯೋಗ ಪಡೆದುಕೊಂಡು ಕಲಿಕಾ ವಾತಾವರಣ ನಿರ್ಮಿಸಬೇಕೆಂದು ಇದಕ್ಕೆ ಪೋಷಕರ ಪ್ರೋತ್ಸಾಹ ಅಗತ್ಯವೆಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ. ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಕೋಲಾರ ತಾಲೂಕಿನ ನರಸಾಪುರದಲ್ಲಿಂದು ಕರ್ನಾಟಕ ಮಾದರಿ ಪ್ರಾಥಮಿಕ ಶಾಲೆಯಲ್ಲಿಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಅಗಸ್ತ್ಯ ಇಂಟರ್ನ್ಯಾಷನಲ್ ಫೌಂಡೇಶನ್, ಶ್ರೀ ಬೈರೇಗೌಡ ಎಜುಕೇಷನಲ್ ಟ್ರಸ್ಟ್ö ಹಾಗೂ ವೇಮಗಲ್ ಕೃಷ್ಣ ಬೈರೇಗೌಡ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಕ್ರಿಯವಾಗಿ ಬೇಸಿಗೆ ಶಿವರದಲ್ಲಿ ಭಾಗವಹಿಸಿ ಉತ್ತಮ ನಾಯಕತ್ವ, ಶಿಸ್ತು, ಸಹಕಾರ, ಸೃಜನಶೀಲತೆ, ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಲೆ, ಕ್ರೀಡೆ, ಸಾಹಿತ್ಯ, ಯೋಗ, ವಿಜ್ಞಾನ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಕಲಿಯುವ ಮೂಲಕ ಇಂತಹ ತರಬೇತಿಗಳನ್ನು ಯಶಸ್ವಿಗೊಳಿಸಲು ವಿದ್ಯಾರ್ಥಿಗಳು ಭಾಗವಹಿಸಬೇಕು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಶಿಬಿರದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಡಾ. ಶ್ರೀನಿವಾಸ ಪ್ರಸಾದ್, ಕೆ.ವಿ. ಜಗನ್ನಾಥ್, ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಎಂ.ಟಿ.ಬಿ. ಶ್ರೀನಿವಾಸ್, ಕೊಂಡರಾಜನಹಳ್ಳಿ ಮಂಜುಳಾ, ಪವಿತ್ರ ವಿ, ಸಿರೀಶ ಎಸ್, ವಿನೋದ್, ರಘು ರಾಮ್ ಎಂ.ಎನ್, ಅಗಸ್ತ್ಯ ಫೌಂಡೇಶನ್ ಶಿಕ್ಷಕರಾದ ಶ್ರಾವಣಿ, ಹೇಮಲತ, ಸ್ನೇಹ, ಕವಿತ, ರಜಿನಿ ಮುಂತಾದವರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande