ಮುಧೋಳದಲ್ಲಿ ಗರಿಬಿಚ್ಚಿ ನಲಿದ ನವಿಲು
ಬಾಗಲಕೋಟೆ, 12 ಮೇ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಜೋಶಿ ಪ್ಲಾಟ್ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ಕಂಡು ಬಂದ ನವಿಲಿನ ಮನಮೋಹಕ ನೃತ್ಯ ಸ್ಥಳೀಯರ ಗಮನ ಸೆಳೆದಿದೆ. ಗರಿಬಿಚ್ಚಿ ನಲಿದ ನವಿಲಿನ ಅದ್ಭುತ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು,
ನವಿಲು


ಬಾಗಲಕೋಟೆ, 12 ಮೇ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಜೋಶಿ ಪ್ಲಾಟ್ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ಕಂಡು ಬಂದ ನವಿಲಿನ ಮನಮೋಹಕ ನೃತ್ಯ ಸ್ಥಳೀಯರ ಗಮನ ಸೆಳೆದಿದೆ.

ಗರಿಬಿಚ್ಚಿ ನಲಿದ ನವಿಲಿನ ಅದ್ಭುತ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಳೆಗಾಲದ ಮುನ್ಸೂಚನೆಯಂತೆಯೇ ನವಿಲು ತನ್ನ ಬಣ್ಣಬಣ್ಣದ ಗರಿಗಳನ್ನು ಚಾಚಿ ನಲಿದ ದೃಶ್ಯ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ನಗರದ ಮಧ್ಯಭಾಗದಲ್ಲೇ ಇಂತಹ ಅಪರೂಪದ ದೃಶ್ಯ ಕಂಡು ಬಂದಿರುವುದು ಜನರಲ್ಲಿ ಸಂತಸ ಮೂಡಿಸಿದೆ. ಕೆಲ ಹೊತ್ತು ಜೋಶಿ ಪ್ಲಾಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ತಿರುಗಾಡಿದ ನವಿಲು, ನಂತರ ಸಮೀಪದ ಮರಗಳ ನಡುವೆ ಅಡಗಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ನವಿಲಿನ ನೃತ್ಯವನ್ನು ಕಂಡು ಮಕ್ಕಳು ಸೇರಿದಂತೆ ಸಾರ್ವಜನಿಕರು ಸಂಭ್ರಮಪಟ್ಟರು. ಪ್ರಕೃತಿಯ ಸುಂದರ ಕ್ಷಣವನ್ನು ಕಣ್ತುಂಬಿಕೊಂಡ ಜನರು, ಪರಿಸರ ಸಂರಕ್ಷಣೆ ಹಾಗೂ ಪಕ್ಷಿಗಳ ಉಳಿವಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಅರಣ್ಯ ಪ್ರದೇಶಗಳ ಕುಗ್ಗುತ್ತಿರುವ ಹಿನ್ನೆಲೆ ಕೆಲವೊಮ್ಮೆ ಕಾಡುಪಕ್ಷಿಗಳು ನಗರ ಪ್ರದೇಶಗಳತ್ತ ಬರುತ್ತಿರುವುದು ಸಾಮಾನ್ಯವಾಗಿದ್ದು, ನವಿಲಿನ ಈ ಮನೋಹರ ನೃತ್ಯ ಮುಧೋಳ ಜನತೆಗೆ ವಿಶೇಷ ಆಕರ್ಷಣೆಯಾಯಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande