ಬಳ್ಳಾರಿ : ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ ; ಆಕ್ಷೇಪಣೆಗೆ ಆಹ್ವಾನ
ಬಳ್ಳಾರಿ, 12 ಮೇ (ಹಿ.ಸ.) : ಆ್ಯಂಕರ್ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ‘ಭೂ ಒಡೆತನ ಯೋಜನೆ''ಯಡಿ ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಭೂ
ಬಳ್ಳಾರಿ : ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ ; ಆಕ್ಷೇಪಣೆಗೆ ಆಹ್ವಾನ


ಬಳ್ಳಾರಿ, 12 ಮೇ (ಹಿ.ಸ.) :

ಆ್ಯಂಕರ್ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2025-26ನೇ ಸಾಲಿನ ‘ಭೂ ಒಡೆತನ ಯೋಜನೆ'ಯಡಿ ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಭೂ ಮಾಲೀಕರೊಬ್ಬರು ತಮ್ಮ ಜಮೀನನ್ನು ನಿಗಮಕ್ಕೆ ಮಾರಾಟ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಜಮೀನಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಅವುಗಳನ್ನು ಸಲ್ಲಿಸಲು ನಿಗಮವು ಕಾಲಾವಕಾಶ ನೀಡಿದೆ.

ಜಮೀನಿನ ವಿವರ :

ಬಳ್ಳಾರಿ ತಾಲ್ಲೂಕಿನ ರೂಪನಗುಡಿ ಹೋಬಳಿಯ ಕಮ್ಮರಚೇಡು ಗ್ರಾಮದ ಸರ್ವೆ ನಂಬರ್ 4/2, ವಿಸ್ತೀರ್ಣ 7 ಎಕರೆ 58 ಗುಂಟೆ.

ಮಾಲೀಕರ ವಿಳಾಸ: ಕೆ.ಹೆಚ್. ಮಹೇಶ್ (ತಂದೆ: ಹನುಮಂತ ರೆಡ್ಡಿ), ವಾರ್ಡ್ ನಂ. 29, ಬಂಡಿಹಟ್ಟಿ, ತಾಯಮ್ಮ ದೇವಸ್ಥಾನ ಹತ್ತಿರ, ಕೌಲ್ ಬಜಾರ್, ಬಳ್ಳಾರಿ ನಗರ.

ಈ ಜಮೀನಿನ ಮಾರಾಟ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಯಾವುದೇ ರೀತಿಯ ಕಾನೂನಾತ್ಮಕ ಅಥವಾ ಇತರ ಆಕ್ಷೇಪಣೆಗಳಿದ್ದಲ್ಲಿ ಮೇ 30 ರೊಳಗಾಗಿ ಲಿಖಿತ ರೂಪದಲ್ಲಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ನಂ. 37/10, ನಂದಿ ಶಾಲೆ ಹಿಂಭಾಗ, 1ನೇ ತಿರುವು, ನಂದಿ ಕಾಲೋನಿ, ಕಂಟೋನ್ಮೆಂಟ್, ಬಳ್ಳಾರಿ ಇಲ್ಲಿಗೆ ಕಚೇರಿಯ ಅವಧಿಯಲ್ಲಿ ನೇರವಾಗಿ ಭೇಟಿ ನೀಡಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ.08392-245551 ಗೆ ಸಂಪರ್ಕಿಸಬಹುದಾಗಿದೆ.

ನಿಗದಿತ ದಿನಾಂಕದ ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande