



ಕುಡತಿನಿ, 12 ಮೇ (ಹಿ.ಸ.) :
ಆ್ಯಂಕರ್ : ಕುಡತಿನಿ ಭೂ ಸಂತ್ರಸ್ತರ ರೈತರ ಹೋರಾಟವು ಮಂಗಳವಾರಕ್ಕೆ 1243 ಕ್ಕೆ ಕಾಲಿಟ್ಟಿದೆ. ಅಲ್ಲದೇ, ಭೂ ಸಂತ್ರಸ್ತರು ಮಂಗಳವಾರದಿಂದ ಸರಣಿ ಸತ್ಯಾಗ್ರಹವನ್ನು ಮಂಗಳವಾರದಿಂದ ಕುಡತಿನಿಯಲ್ಲಿ ಪ್ರಾರಂಭಿಸಿದ್ದಾರೆ.
ಭೂ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರೂ ಆಗಿರುವ ಯು. ಬಸವರಾಜ್ ಅವರ ನೇತೃತ್ವದಲ್ಲಿ ಸರದಿ ಉಪವಾಸ ಸತ್ಯಾಗ್ರಹ ಪ್ರಾರಂಭವಾಯಿತು. ಊರಿನ ಹಿರಿಯ ಮುಖಂಡರಾದ ವೆಂಕಟರಮಣ ಬಾಬು, ಜಗ್ಗ ಮಲ್ಲಿಕಾರ್ಜುನ. ಕೆ.ಎಂ. ನಾಗರಾಜ, ಮೆಟ್ರಿಕಿ ಅಂಬರೀಶ್ ಅವರು ಮೊದಲ ದಿನದ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಕುಡತಿನಿ, ಹರಗಿನಡೋಣಿ, ಜಾನೆಕುಂಟೆ, ವೇಣಿವೀರಾಪುರ, ಕೊಳಗಲ್ಲು, ಸಿದ್ದಮ್ಮನಹಳ್ಳಿ, ಯರಂಗಳಿಗಿ, ಗ್ರಾಮಗಳ 13 ಸಾವಿರ ಎಕರೆಗೂ ಹೆಚ್ಚಿನ ಭೂಮಿಯನ್ನು ಕೆಐಡಿಬಿಯು ಸ್ವಾಧೀನ ಮಾಡಿಕೊಂಡು, ಬೃಹತ್ ಕೈಗಾರಿಕೆಗಳಿಗೆ ನೀಡಿ, ಪ್ರಸ್ತುತ ಆ ಭೂಮಿಗಳನ್ನು ಬೇರೆ ಬೇರಿ ಕೈಗಾರಿಕೆಗಳಿಗೆ ಮರು ಹಂಚಿಕೆ ಮಾಡುತ್ತಿದೆ.
ಸತ್ಯಾಗ್ರಹದ ವೇದಿಕೆಯಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿ ಹಿರಿಯ ಮುಖಂಡರಾದ ಜಂಗ್ಲಿ ಸಾಬು, ತಿಮ್ಮಪ್ಪ, ನಾಗಲಿಂಗ ಆಚಾರಿ, ಬಾವಿ ಶಿವಕುಮಾರ, ಸಂಪತ್ತು, ನರಸಿಂಹಮೂರ್ತಿ, ರಾಜಪ್ಪ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಮಹಾಂತಮ್ಮ, ರೈತ ಮಹಿಳೆಯರಾದ ಮಲ್ಲಮ್ಮ, ಪದ್ಮಾವತಿ, ವೆಂಕಟರಮಣ ಬಾಬು, ಸರೋಜಾ, ಕಾಳಮ್ಮ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್