ಶ್ರೀ ದತ್ತಾತ್ರೇಯ ದೇವಸ್ಥಾನ ಜೀರ್ಣೋದ್ಧಾರಕ್ಕೆ ವಿಧ್ಯುಕ್ತ ಚಾಲನೆ
ಗದಗ, 12 ಮೇ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆ ನರೇಗಲ್ಲ ಪಟ್ಟಣದಲ್ಲಿರುವ, ನೂರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಭಕ್ತರಿಂದ “ಎರಡನೇ ಗಾಣಗಾಪುರ” ಎಂದೇ ಕರೆಯಿಸಿಕೊಳ್ಳುವ ಶ್ರೀ ದತ್ತಾತ್ರೇಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಬ್ರಹ್ಮ ಸಮಾಜದ ಹಿರಿಯರಾದ
ಫೋಟೋ


ಗದಗ, 12 ಮೇ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆ ನರೇಗಲ್ಲ ಪಟ್ಟಣದಲ್ಲಿರುವ, ನೂರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಭಕ್ತರಿಂದ “ಎರಡನೇ ಗಾಣಗಾಪುರ” ಎಂದೇ ಕರೆಯಿಸಿಕೊಳ್ಳುವ ಶ್ರೀ ದತ್ತಾತ್ರೇಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಬ್ರಹ್ಮ ಸಮಾಜದ ಹಿರಿಯರಾದ ಡಾ. ಜಿ.ಕೆ. ಕಾಳೆ ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಗಲ್ಲ ಪಟ್ಟಣದಲ್ಲಿ ನೆಲೆಸಿರುವ ಶ್ರೀ ಗುರು ದತ್ತಾತ್ರೇಯ ಸ್ವಾಮಿ ಭಕ್ತರ ಕಾಮನೆಗಳನ್ನು ನೆರವೇರಿಸುವ ಭಕ್ತವತ್ಸಲ ದೇವರು ಎಂದು ಹೇಳಿದರು. “ಗುರು ದತ್ತಾತ್ರೇಯನನ್ನು ನಂಬಿ ಕೈಗೊಂಡ ಅನೇಕ ಕಾರ್ಯಗಳು ಯಶಸ್ವಿಯಾಗಿರುವುದನ್ನು ನಾವು ಹಲವು ಬಾರಿ ಕಂಡಿದ್ದೇವೆ. ಭಕ್ತರ ನಂಬಿಕೆ ಮತ್ತು ಶ್ರದ್ಧೆಯೇ ಈ ಕ್ಷೇತ್ರದ ಶಕ್ತಿ” ಎಂದು ಅಭಿಪ್ರಾಯಪಟ್ಟರು.

ಸುಮಾರು ನಾಲ್ಕು ವರ್ಷಗಳ ಹಿಂದೆ ಭಕ್ತರ ಸಹಕಾರದಿಂದ ದೇವಸ್ಥಾನವನ್ನು ನೂತನವಾಗಿ ನಿರ್ಮಿಸಲಾಗಿತ್ತು. ಆದರೆ ಇದೀಗ ಮೇಲ್ಮಹಡಿ ಭಾಗ ಶಿಥಿಲಾವಸ್ಥೆ ತಲುಪಿರುವ ಹಿನ್ನೆಲೆ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ತೆ. ನಾಗರಾಜ ಗ್ರಾಮಪುರೋಹಿತ, “ಗುರು ದತ್ತಾತ್ರೇಯನ ಜೋಳಿಗೆಗೆ ಎಂದಿಗೂ ಬರವಿಲ್ಲ. ಭಕ್ತರ ಸಹಕಾರ ಮತ್ತು ಶ್ರೀ ದತ್ತನ ಆಶೀರ್ವಾದದೊಂದಿಗೆ ಈ ಮಹತ್ಕಾರ್ಯ ಆರಂಭಿಸಲಾಗಿದೆ. ಎಲ್ಲ ಭಕ್ತರು ಉದಾರ ಮನಸ್ಸಿನಿಂದ ಸಹಕರಿಸಬೇಕು” ಎಂದು ಮನವಿ ಮಾಡಿದರು.

ದೇವಸ್ಥಾನದ ಜೀರ್ಣೋದ್ಧಾರ ಜೊತೆಗೆ ಶ್ರೀ ದತ್ತಾತ್ರೇಯ ಕಲ್ಯಾಣ ಮಂಟಪ ನಿರ್ಮಾಣ ಯೋಜನೆಯೂ ರೂಪಿಸಲಾಗಿದ್ದು, ಸುಮಾರು ₹1.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳುವ ಉದ್ದೇಶವಿದೆ ಎಂದು ತಿಳಿಸಿದರು.

ಭೂಮಿಪೂಜಾ ವಿಧಿಗಳನ್ನು ದೇವಸ್ಥಾನದ ಅರ್ಚಕರಾದ ಶ್ರೀವಲ್ಲಭಟ್ಟ ಸದಾರಜೋಷಿ ಹಾಗೂ ಆದರ್ಶ ಕುಲಕರ್ಣಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಎ.ಜಿ. ಕುಲಕರ್ಣಿ, ಕಾರ್ಯದರ್ಶಿ ರಘುನಾಥ ಕೊಂಡಿ, ಆರುಣ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಶ್ರೀ ದತ್ತ ಭಕ್ತ ಮಂಡಳಿಯ ಸದಸ್ಯರು, ಸುಮಂಗಲೆಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande