
ಬಳ್ಳಾರಿ, 12 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಪಡಿತರ ಕಾರ್ಡುದಾರರಿಗೆ ಮೇ ಮತ್ತು ಜೂನ್-2026ರ ಮಾಹೆಯ ಪಡಿತರ ಹಂಚಿಕೆ ಮಾಡಲಾಗುತ್ತಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಪಿಹೆಚ್ಹೆಚ್ ಕಾರ್ಡುದಾರರಿಗೆ ಎನ್ಎಫ್ಎಸ್ಎ ಯೋಜನೆಯಡಿ 5 ಕೆ.ಜಿ ಮತ್ತು ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಸೇರಿ ಪ್ರತಿ ಸದಸ್ಯರಿಗೆ ಒಟ್ಟು 10 ಕೆ.ಜಿ ಆಹಾರಧಾನ್ಯ ನೀಡಲಾಗುತ್ತದೆ.
ಅಂತ್ಯೋದಯ ಕಾರ್ಡುದಾರರಿಗೆ ಎನ್ಎಫ್ಎಸ್ಎ ಯೋಜನೆಯಡಿ 35 ಕೆ.ಜಿ ಆಹಾರಧಾನ್ಯ ನೀಡಲಾಗುತ್ತದೆ.
ಅನ್ನಭಾಗ್ಯ ಹೆಚ್ಚುವರಿ ಪಡಿತರ: ಅಂತ್ಯೋದಯ ಕಾರ್ಡ್ನಲ್ಲಿ 4ಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ, ಅಂತಹ ಸದಸ್ಯರಿಗೆ ತಲಾ 5 ಕೆ.ಜಿ ಆಹಾರಧಾನ್ಯ ವಿತರಿಸಲಾಗುತ್ತದೆ.
ಮೇ ಮಾಹೆಯಲ್ಲಿ ಮೇ ಮತ್ತು ಜೂನ್ ತಿಂಗಳಿಗೆ ಸಂಬಂಧಿಸಿದ ಕೇವಲ ಎನ್ಎಫ್ಎಸ್ಎ ಆಹಾರಧಾನ್ಯಗಳನ್ನು ಮಾತ್ರ ವಿತರಿಸಲಾಗುತ್ತದೆ. ಜೂನ್ ಮಾಹೆಯಲ್ಲಿ ಮೇ ಮತ್ತು ಜೂನ್ ತಿಂಗಳ ಪಾಲಿನ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಮಾತ್ರ ವಿತರಿಸಲಾಗುತ್ತದೆ.
ಈ ಹಂಚಿಕೆಯ ಹಿನ್ನೆಲೆಯಲ್ಲಿ, ಮೇ ಮತ್ತು ಜೂನ್ ತಿಂಗಳಲ್ಲಿ ಪಡಿತರ ಪಡೆಯುವಾಗ ಸಾರ್ವಜನಿಕರು ಎರಡು ಬಾರಿ ಬಯೋ ದೃಢೀಕರಣ ನೀಡಬೇಕೆಂದು ಸೂಚಿಸಲಾಗಿದೆ. ಪಡಿತರ ಹಂಚಿಕೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ, ನಿಗದಿಪಡಿಸಿದ ಪ್ರಮಾಣದಂತೆಯೇ ಆಹಾರಧಾನ್ಯಗಳನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್