ಮತದಾರರ ಪರಿಷ್ಕರಣೆಯ ಬಗ್ಗೆ ಜೆಡಿಎಸ್ ಜಾಗೃತಿ ಕಾರ್ಯಕ್ರಮ
ಮತದಾರರ ಪರಿಷ್ಕರಣೆಯ ಬಗ್ಗೆ ಜೆಡಿಎಸ್ನಿಂದ ಜಾಗೃತಿ ಕಾರ್ಯಕ್ರಮ
ಕೋಲಾರ ತಾಲ್ಲೂಕಿನ ಕ್ಯಾಲನೂರು ಹೋಬಳಿಯ ಚನ್ನಸಂದ್ರ ಗ್ರಾಮದಲ್ಲಿ ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮತದಾರರ ಪರಿಷ್ಕರಣೆಯ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕೋಲಾರ, ೧೨ ಮೇ (ಹಿ.ಸ) :

ಆ್ಯಂಕರ್ : ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ಯಾಲನೂರು ಭಾಗದಲ್ಲಿ ಯಾವುದೇ ನೀರಾವರಿ ಯೋಜನೆಗಳು ಜಾರಿಯಾಗಿಲ್ಲ ಕೂಡಲೇ ಸರ್ಕಾರವು ಈ ಭಾಗದಲ್ಲಿ ನೀರಾವರಿ ಯೋಜನೆಗಳ ಜೊತೆಗೆ ಅಭಿವೃದ್ಧಿಗೆ ಮಾಡುವಂತೆ ರಾಜ್ಯ ಸರ್ಕಾರವನ್ನು ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಒತ್ತಾಯಿಸಿದರು.

ತಾಲೂಕಿನ ವೇಮಗಲ್ ಹೋಬಳಿಯ ಚನ್ನಸಂದ್ರ ಗ್ರಾಮದಲ್ಲಿ ಮಂಗಳವಾರ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್.ಐ.ಆರ್ ಕುರಿತು ಜಾಗೃತಿ ಮತ್ತು ಪಕ್ಷದ ವತಿಯಿಂದ ಬೂತ್ ಮಟ್ಟದ ಏಜೆಂಟ್ ಗಳ ನೇಮಿಸುವ ಕುರಿತು ಜೆಡಿಎಸ್ ಪಕ್ಷದಿಂದ ಗ್ರಾಮ ಪಂಚಾಯತಿ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಬೆಂಗಳೂರಿನ ಕೆಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ಯೋಜನೆಗಳ ಮೂಲಕ ನೀರು ತರಲಾಗಿದೆ ಆದರೆ ಕ್ಯಾಲನೂರು ಭಾಗದಲ್ಲಿ ಯಾವುದೇ ಯೋಜನೆ ಜಾರಿಯಾಗಿಲ್ಲ ಕೂಡಲೇ ನೀರಾವರಿ ಯೋಜನೆ ಜಾರಿಗೆ ಮುಂದಾಗಲಿ ಎಂದು ಒತ್ತಾಯಿಸಿದರು.

ಎಸ್ ಐಆರ್ ಪ್ರಕ್ರಿಯೆ ಕೇವಲ ಕಾಗದಕ್ಕೆ ಸೀಮಿತವಾಗದೆ ಗ್ರಾಮದ ಮೂಲಸೌಕರ್ಯಗಳ ಅಭಿವೃದ್ಧಿಗೆ ದಾರಿಯಾಗಬೇಕು. ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಸಮನ್ವಯವಿದ್ದಾಗ ಮಾತ್ರ ಪಾರದರ್ಶಕ ಆಡಳಿತ ಸಾಧ್ಯವಾಗುತ್ತದೆ ಅನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಜೆಡಿಎಸ್ ವತಿಯಿಂದ ಸಮಿತಿಗಳನ್ನು ಮಾಡಿ ಅದರ ಮೂಲಕ ಎಚ್ಚರಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಅವರು, ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ನನ್ನ ಸಹಕಾರವು ಖಂಡಿತವಾಗಿಯೂ ಇರುತ್ತದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡ ವಕ್ಕಲೇರಿ ರಾಮು, ವೇಮಗಲ್ ಕುರಗಲ್ ಪಟ್ಟಣ ಪಂಚಾಯಿತಿ ಸದಸ್ಯರಾದ ಲೋಕೇಶ್ ಮರಿಯಪ್ಪ, ಕುರುಗಲ್ ರಮೇಶ, ಎಸ್ಟಿ ಘಟಕದ ತಾಲೂಕು ಅಧ್ಯಕ್ಷ ಕುರುಗಲ್ ಗಿರೀಶ್, ವೇಮಗಲ್ ಸೊಸೈಟಿ ಉಪಾಧ್ಯಕ್ಷ ಹೊಳೇರಹಳ್ಳಿ ಅಶೋಕ್, ಮುಖಂಡರಾದ ಕ್ಯಾಲನೂರು ಸುರೇಶ್, ಅಮ್ಮನಲ್ಲೂರು ರಮೇಶ್, ಚಾಕರಸನಹಳ್ಳಿ ಅಂಜಿನಪ್ಪ, ಚೋಳಘಟ್ಟ ಬಸವರಾಜ್ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಚನ್ನಸಂದ್ರ ಲೋಕೇಶ್, ಮುಖಂಡರಾದ ಚನ್ನಸಂದ್ರ ರಮೇಶ್, ನಾರಾಯಣಸ್ವಾಮಿ, ದಾಸಣ್ಣ, ಮುನಿಶಾಮರೆಡ್ಡಿ, ಅಂಜಿನಪ್ಪ,ರಾಮಣ್ಣ, ವೆಂಕಟೇಶ್ ಬೀಚಗೊಂಡಹಳ್ಳಿ ರಾಮೇಗೌಡ, ಸೀನಪ್ಪ, ರವಿರಾಜ್, ಸಂದೀಪ್, ಅಶೋಕ, ಶಶಿ, ಚನ್ನಪ್ಪ ಕಾಮಾಂಡಹಳ್ಳಿ ಸುರೇಶ್, ಕಡಗಟ್ಟೂರು ನಾರಾಯಣಸ್ವಾಮಿ, ಪ್ರಶಾಂತ್, ಸೊಣ್ಣೆಗೌಡ, ಉರಟಿ ಅಗ್ರಹಾರ ಸೋಮಣ್ಣ, ಚಂದ್ರಪ್ಪ ರಘುಪತಿ ಅಗ್ರಹಾರ ರೆಡ್ಡಿ, ಸುಧಾಕರ್, ಗೋಪಾಲಪ್ಪ, ಬೈರಂಡಹಳ್ಳಿ ಜಯರಾಮ, ವೆಂಕಟೇಶ್ ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande