

ಕೊಪ್ಪಳ, 12 ಮೇ (ಹಿ.ಸ.) :
ಆ್ಯಂಕರ್ : ಜಾನುವಾರುಗಳು ಸಾವಿರಾರು ಸಂಖ್ಯೆಯಲ್ಲಿದ್ದು ಜಿಲ್ಲಾಧಿಕಾರಿಗಳು ಬಸಾಪುರ ಕೆರೆ ಕಾಂಪೌಂಡ್ ತೆರವು ಮಾಡಿ ಬಲ್ಡೋಟ ಕಂಪನಿಯಿಂದ ಬಿಡಿಸಿ ಕೊಡುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ ಆಕ್ರೋಶ ವ್ಯಕ್ತಪಡಿಸಿದರು.
ಬೇಸಿಗೆಯಲ್ಲಿ ಕೆರೆ ಸುತ್ತಲಿರುವ ಸಾವಿರಾರು ಕುರಿ, ಹಸುಗಳು ನೀರಿಲ್ಲದೇ, ಮೇವಿಲ್ಲದೆ ಬಡಕಲು ಎಲುಬಿನ ಹಂದರದಂತಾಗಿ ದಾರಿಯಲ್ಲಿ ನಡೆದು ಹೋಗುತ್ತಿರುವಾಗಲೇ ಮಧ್ಯದಲ್ಲಿ ಬಿದ್ದು ಸಾಯುತ್ತಿವೆ. ಇಂಥ ಭೀಕರ ಸಂದರ್ಭದಲ್ಲಿ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿದಿನಗಳು ನೆರವಿಗೆ ಬಂದು ಬಸಾಪುರ ಕೆರೆ ಮುಕ್ತಗೊಳಿಸಬೇಕು ಎಂದರು.
ಧರಣಿಯಲ್ಲಿ ಮೂಕಪ್ಪ ಮೇಸ್ತ್ರಿ ಬಸಾಪುರ, ರೈತ ಮುಖಂಡ ಸುಖಮುನಿಯಪ್ಪ ಬಡಿಗೇರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಹನುಮಂತ ತಳವಾರ ಬಸಾಪುರ ಮುಂತಾದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್