ಬಿಳಿಜೋಳ ಖರೀದಿ ಪ್ರಾರಂಭ : ಉಪ ನಿರ್ದೇಶಕ ನಜೀರ್ ಅಹ್ಮದ್
ರಾಯಚೂರು, 11 ಮೇ (ಹಿ.ಸ.) : ಆ್ಯಂಕರ್ : ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಋತುವಿನಲ್ಲಿ ನೋಂದಣಿ ಮಾಡಿಕೊಂಡಿರುವ ರೈತರಿಂದ ಬಿಳಿಜೋಳವನ್ನು ಖರೀದಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಖರೀದಿ ಕೇಂ
ಬಿಳಿಜೋಳ ಖರೀದಿ ಪ್ರಾರಂಭ: ಉಪ ನಿರ್ದೇಶಕ ನಜೀರ್ ಅಹ್ಮದ್


ರಾಯಚೂರು, 11 ಮೇ (ಹಿ.ಸ.) :

ಆ್ಯಂಕರ್ : ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಋತುವಿನಲ್ಲಿ ನೋಂದಣಿ ಮಾಡಿಕೊಂಡಿರುವ ರೈತರಿಂದ ಬಿಳಿಜೋಳವನ್ನು ಖರೀದಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದ್ದು, ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಲಾದ ಅನುಕ್ರಮವಾರು ರೈತರಿಂದ ಖರೀದಿಯನ್ನು ಮಾಡಲಾಗುವುದು ಎಂದು ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಸದಸ್ಯ ಕಾರ್ಯದರ್ಶಿಗಳು ಆಗಿರುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ನಜೀರ್ ಅಹ್ಮದ್ ಅವರು ತಿಳಿಸಿದ್ದಾರೆ.

ರೈತರು ಈಗಾಗಲೇ ತಮ್ಮ ಎಫ್ಐಡಿಯೊಂದಿಗೆ ನೋಂದಣಿ ಮಾಡಿಕೊಂಡಿದ್ದು, ದಿನಾಂಕ: 11.05.2026 ರಿಂದ ಜಿಲ್ಲೆಯಲ್ಲಿರುವ ಎಲ್ಲಾ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ. ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಲಾದ ಅನುಕ್ರಮವಾರು ರೈತರಿಂದ ಖರೀದಿಯನ್ನು ಮಾಡಲಾಗುವುದು. ರೈತರು ಆತುರ ಪಡದೇ ಅಥವಾ ನೂಕು ನುಗ್ಗಲು ಮಾಡದೇ ತಮಗೆ ಖರೀದಿ ಕೇಂದ್ರದಿ0ದ ನೀಡಲಾಗುವ ದಿನಾಂಕವಾರು ತಾವು ಬೆಳೆದಿರುವ ಜೋಳವನ್ನು ಸರಬರಾಜು ನೀಡುವುದು. ಅಲ್ಲದೇ ಖರೀದಿ ಕೇಂದ್ರಕ್ಕೆ ಬರುವ ಮುಂಚಿತವಾಗಿಯೇ ದಾಸ್ತಾನಿನ ಗುಣಮಟ್ಟ, ತೇವಾಂಶ ಹಾಗೂ ಸ್ವಚ್ಛತೆಯ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.

ಈಗಾಗಲೇ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಸರ್ವೆ ನಂ ಹಾಗೂ ಎಫ್ಐಡಿಗಳನ್ನು ಬೆಳೆದರ್ಶಕ ಆಪ್ ಮುಖಾಂತರ ನೈಜ್ಯತೆಯನ್ನು ಪರಿಶೀಲಿಸಲಾಗುವುದು. ಸಂಶಾಯತ್ಮಾಕ ಹಾಗೂ ಬಿಳಿ ಜೋಳವನ್ನು ಬೆಳೆಯದೇ ಇರುವ ಸರ್ವೆ ನಂ. ವಾರು ಎಫ್ಐಡಿ ಗಳನ್ನು ಬ್ಲಾಕ್ ಮಾಡಲು ಕ್ರಮವಹಿಸಲಾಗಿದೆ. ಇದಕ್ಕೆ ಆಕ್ಷೇಪಣೆಗಳೇನಾದರು ಇದ್ದಲ್ಲಿ ಸರ್ಮಥನೀಯ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ತಹಶೀಲ್ದಾರರ ಕಚೇರಿಗೆ ಸಂಪರ್ಕಿಸಬಹುದಾಗಿದೆ. ಮತ್ತು ಬಿಳಿ ಜೋಳವನ್ನು ಬೆಳೆಯದೇ ನೋಂದಣಿ ಮಾಡಿಕೊಂಡು ಖರೀದಿ ಕೇಂದ್ರಗಳಿಗೆ ಜೋಳವನ್ನು ಸರಬರಾಜು ಮಾಡಿರುವುದು ಕಂಡುಬ0ದಲ್ಲಿ ಅಂತವರ ವಿರುದ್ಧ ಕಾನೂನತ್ಮಕ ಕ್ರಮವನ್ನು ಕೈಗೊಳ್ಳುವುದಲ್ಲದೇ ಈ ಖರೀದಿಯ ಹಣವನ್ನು ತಡೆ ಹಿಡಿಯಲಾಗುವುದು ಎಂದು ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ ಸದಸ್ಯ ಕಾರ್ಯದರ್ಶಿಗಳು ಆಗಿರುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ನಜೀರ್ ಅಹ್ಮದ್ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande