
ಕನಕಗಿರಿ, 11 ಮೇ (ಹಿ.ಸ.) :
ಆ್ಯಂಕರ್ : ಕನಕಗಿರಿ ತಾಲ್ಲೂಕಿನ ನವಲಿ ತಾಂಡಾದಲ್ಲಿರುವ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ 2026-27ನೇ ಸಾಲಿನ 1ನೇ ತರಗತಿ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ವಸತಿ ಶಾಲೆಯಲ್ಲಿ ಒಟ್ಟು 25 ಸೀಟುಗಳು ಲಭ್ಯವಿದ್ದು, ಪರಿಶಿಷ್ಟ ಜಾತಿಗೆ 19 ಸ್ಥಾನಗಳು ಮತ್ತು ಇತರೆ 6 ಸ್ಥಾನಗಳು ಲಭ್ಯ ಇವೆ. ಅರ್ಜಿ ಸಲ್ಲಿಕೆ ಮೇ 15 ರಿಂದ ಪ್ರಾರಂಭವಾಗಲ್ಲಿದ್ದು, ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನಾಂಕ ಆಗಿರುತ್ತದೆ.
ಅರ್ಹತೆ ಮತ್ತು ಶರತ್ತುಗಳು : ಅರ್ಜಿಯೊಂದಿಗೆ ತಹಶೀಲ್ದಾರರವರಿಂದ ಪಡೆದ ಆರ್.ಡಿ ಸಂಖ್ಯೆಯುಳ್ಳ ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಬೇಕು. ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ ರೂ. 2.50 ಲಕ್ಷದೊಳಗಿರಬೇಕು. 1ನೇ ತರಗತಿಯ ಖಾಲಿ ಸ್ಥಾನಗಳಿಗೆ ವಿಶೇಷ ವರ್ಗದವರಿಗೆ ಮೊದಲ ಆದ್ಯತೆ ನಂತರ ಅಂಕಗಳ ಆಧಾರದ ಮೇಲೆ ಪ್ರವೇಶ ಕಲ್ಪಿಸಲಾಗುವುದು. ಪೌರಕಾರ್ಮಿಕರ ಮಕ್ಕಳು, ಸಫಾಯಿ ಕರ್ಮಚಾರಿಗಳ ಮಕ್ಕಳು, ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಮಕ್ಕಳು, ದೇವದಾಸಿಯರ ಮಕ್ಕಳು, ಅಂಗವಿಕಲತೆಯನ್ನು ಹೊಂದಿರುವವರು, ಕೋವಿಡ-19 ಮುಂತಾದ ಪ್ರಕೃತಿ ವಿಕೋಪದಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು, ಸಿಂಗಲ್ ಫ್ಯಾಮಿಲಿ ಮಕ್ಕಳು, ಯೋಜನಾ ನಿರಾಶ್ರಿತರ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ಕೊಳಗೇರಿಗಳಲ್ಲಿ ವಾಸಿಸುತ್ತಿರುವವರ ಮಕ್ಕಳು, ಕೃಷಿ ಕಾರ್ಮಿಕರ ಮಕ್ಕಳು, ಸಾಲ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು, ದೌರ್ಜನ್ಯದಲ್ಲಿ ನೊಂದವರ ಮಕ್ಕಳು, ಜೀತ ವಿಮುಕ್ತ ಮಕ್ಕಳು ಸೇರಿದಂತೆ ವಿಶೇಷ ವರ್ಗದ ಮಕ್ಕಳಿಗೆ ಮೊದಲನೇ ಆದ್ಯತೆ ನೀಡಲಾಗುವುದು.
ಅರ್ಜಿಯನ್ನು ಮೇ. 25 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಗಂಗಾವತಿ ರವರ ಕಛೇರಿಗೆ ಅಥವಾ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನವಲಿತಾಂಡಾ ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ, ಗಂಗಾವತಿ ಹಾಗೂ ಮುಖ್ಯೋಪಾಧ್ಯಾಯರು, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನವಲಿತಾಂಡಾ ಇವರುಗಳನ್ನು ಸಂಪರ್ಕಿಸವ0ತೆ ಗಂಗಾವತಿ ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-1 ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಕನೂರು ಪ.ಪಂ: ಎಸ್.ಎಫ್.ಸಿ. ಅನುದಾನದಡಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ ಮೇ 11 (ಕರ್ನಾಟಕ ವಾರ್ತೆ): ಕುಕನೂರು ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸನ್ 2026-27ನೇ ಸಾಲಿನ ಎಸ್.ಎಫ್.ಸಿ. ಅನುದಾನದಲ್ಲಿ ಶೇ. 24.10 ಹಾಗೂ ಶೇ. 7.25ರ ಮತ್ತು ಶೇ. 5ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೇ ಜನಾಂಗದ ಹಾಗೂ ವಿಕಲಚೇತನರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಶೇ. 24.10 ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡ ಜನಾಂಗದ ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ನೆರವು ಯೋಜನೆಯಡಿ ಹಾಗೂ ಶೇ 7.25 ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಜನಾಂಗದ ವಿವಿಧ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ನೆರವು ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಹಿಂದಿನ ವರ್ಷದ ಅಂಕಪಟ್ಟಿ, ಚಾಲ್ತಿ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಿಕ್ಷಣ ಸಂಸ್ಥೆಯಿಂದ ವ್ಯಾಸಂಗ ಮೂಲ ಪ್ರಮಾಣ ಪತ್ರ,ಪ್ರಸಕ್ತ ಸಾಲಿನಲ್ಲಿ ಇತರೇ ಯಾವುದೇ ಇಲಾಖೆಯಿಂದ ಪ್ರೋತ್ಸಾಹ ಧನ ಪಡೆದಿಲ್ಲದಿರುವ ಕುರಿತು ಒಪ್ಪಿಗೆ ಪತ್ರ, ಚಾಲ್ತಿ ವರ್ಷದ ಜಾತಿ & ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ,ಸ್ಪಷ್ಟವಾಗಿರುವ ಬ್ಯಾಂಕ ಪಾಸ್ ಪುಸ್ತಕದ ಝರಾಕ್ಷ ಪ್ರತಿ ಹಾಗೂ ಇತ್ತೀಚಿನ 2 ಭಾವಚಿತ್ರಗಳನ್ನು ಲಗತ್ತಿಸಬೇಕು.
7.25 ಯೋಜನೆಯಡಿಯಲ್ಲಿ ಇತರೆ ಬಡ ವರ್ಗದ ಪರಿಶಿಷ್ಟ ಜಾತಿ ಜನಾಂಗದವರ ಸಣ್ಣ ಉದ್ದಿಮೆದಾರರು ಅರ್ಜಿ ಸಲ್ಲಿಸಲು ಉದ್ದೇಮೆಗಾಗಿ ಸಾಲ ಪಡೆದ ಸಬ್ಸಿಡಿ ಕುರಿತು ಬ್ಯಾಂಕಿನಿಂದ ದೃಢೀಕರಣ ಪ್ರಮಾಣ ಪತ್ರ, ಜಾತಿ & ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ, ಆಧಾರ ಕಾರ್ಡ, ಚುನಾವಣೆ ಗುರುತಿನ ಚೀಟಿ ಹಾಗೂ ಇತ್ತೀಚಿನ 2 ಭಾವಚಿತ್ರಗಳನ್ನು ಲಗತ್ತಿಸಬೇಕು. ಶೇ 5 ಯೋಜನೆಯಡಿಯಲ್ಲಿ ಕುಕನೂರು ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬುದ್ಧಿಮಾಂಧ್ಯ ಮತ್ತು ಬಹುವಿಧ ಅಂಗವಿಕಲತೆ, ಸರಬಲ್ ಪಾಲಸಿ ಹೊಂದಿದ ವಿಕಲಚೇತನ ಮಕ್ಕಳ ಆರೈಕೆದಾರಿಗೆ ಭತ್ಯೆ ನೀಡುವ ಯೋಜನೆಯಡಿ ಅರ್ಜಿ ಸಲ್ಲಿಸಲು ಅಂಗವಿಲಕತೆ ಪ್ರಮಾಣ ಪತ್ರ (ಯುಡಿಐಡಿ), ವಿಕಲಚೇತನ ಆಧಾರ ಕಾರ್ಡ, ರೇಷನ್ ಕಾರ್ಡ, ಆದಾಯ ಪ್ರಮಾಣ ಪತ್ರ, ವಿಕಲಚೇತನರ ಇತ್ತೀಚಿನ 2 ಭಾವಚಿತ್ರ ಸಲ್ಲಿಸಬೇಕು.
ಶೇ. 5 ಯೋಜನೆಯಡಿ ಕುಕನೂರು ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಿಕಲಚೇತನರಿಗೆ ಶಸ್ತ್ರಚಿಕಿತ್ಸೆಗಾಗಿ ಸಹಾಯ ಧನ ನೀಡುವ ಯೋಜನೆಯಾಗಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸಲು ಅಂಗವಿಲಕತೆ ಪ್ರಮಾಣ ಪತ್ರ (ಯುಡಿಐಡಿ), ಶಸ್ತ್ರ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾದ ದಾಖಲೆ ಹಾಗೂ ಮೂಲ ಬಿಲ್ ಇತರೆ ದಾಖಲೆಗಳಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕರು ಕೊಪ್ಪಳ ಇವರಿಂದ ದೃಢೀಕರಿಸಿ ನೀಡುವುದು. ಇದರೊಂದಿಗೆ ಜಾತಿ & ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ, ಆಧಾರ ಕಾರ್ಡ, ಚುನಾವಣಾ ಗುರುತಿನ ಚೀಟಿ ಹಾಗೂ ಇತ್ತೀಚಿನ 2 ಭಾವಚಿತ್ರಗಳನ್ನು ಲಗತ್ತಿಸಬೇಕು.
ಅರ್ಜಿ ಸಲ್ಲಿಸಲು ಷರತ್ತುಗಳು : ಅರ್ಜಿದಾರರು ಪ್ರಸಕ್ತ ಸಾಲಿನಲ್ಲಿ ಯಾವುದೇ ಇಲಾಖೆಯಿಂದ ಪ್ರೋತ್ಸಾಹ ಧನ ಸೌಲಭ್ಯ ಪಡೆದಿರಬಾರದು. ಅರ್ಜಿದಾರರು ಕುಕನೂರು ಪಟ್ಟಣ ಪಂಚಾಯತ ವ್ಯಾಪ್ತಿಯ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರು ಮೇ 25 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಪೂರ್ಣ ದಾಖಲಾತಿ ಇರದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಿರಸ್ಕರಿಸಲಾಗುವುದು ಎಂದು ಕುಕನೂರು ಪಟ್ಟಣ ಪಂಚಾಯತ್ ಕಾರ್ಯಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್