
ಗದಗ, 11 ಮೇ (ಹಿ.ಸ.) :
ಆ್ಯಂಕರ್ : ಚಿನ್ಮಯ ಗಾಯತ್ರಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಗದಗ ಕಲಾವಿದರಿಂದ ಮತ್ತೊಂದು ಕಿರುಚಿತ್ರ 'ಇಕಿ ನಂಗ ಬ್ಯಾಡ' ಚಿತ್ರಕ್ಕೆ ಗದಗ ನಗರದ ಕಬಾಡಿ ಬಿಲ್ಡಿಂಗ್ ನಲ್ಲಿರುವ ಶೃದ್ಧಾ ಸ್ವರ ಸಂಗೀತ ವೆಲ್ಫೇರ್ ಟ್ರಸ್ಟಿನ ಸಭಾ ಭವನದಲ್ಲಿ ಮುಹೂರ್ತ ನಡೆಯಿತು.
ಹಲವಾರು ಕಿರುಚಿತ್ರ ಹಾಗೂ ವೆಬ್ ಸೀರಿಜ್ ಗಳ ಕಥೆ, ಸಂಭಾಷಣೆ ಹಾಗೂ ನಿದರ್ಶನ ನಿರ್ವಹಿಸಿರುವ ಹವ್ಯಾಸಿ ರಂಗಕಲಾವಿದರಾದ ಮೌನೇಶ ಸಿ. ಬಡಿಗೇರ(ನರೇಗಲ್ಲ) ಇವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿದರ್ಶನ ಈ ಚಿತ್ರಕ್ಕಿದೆ.
ಸಹ ನಿರ್ದೇಶನ ಹಾಗೂ ಛಾಯಾಗ್ರಾಹಕ ಮಂಜುನಾಥ ಒಂಟೆತ್ತಿನ, ಸುರಜ್ ಮಯೇಕರ ಕಾಸ್ಟೂಮ್ ಡಿಜೈನ್,
ಕುಶಾಲ್ ಮಾಣಕೆ ಸಂಕಲನ ಚಿತ್ರಕ್ಕಿದ್ದು, ವಿಷ್ಣುಆಚಾರ್ಯ ನಿರ್ಮಾಣ ಮಾಡಿರುವರು.
ಕಲಾವಿದರಾದ ವಿಶ್ವನಾಥ ಬೇಂದ್ರೆ, ರಾಚಯ್ಯ ಹೊಸಮಠ, ಉಜ್ವಲ ಕಬಾಡಿ, ಪ್ರಶಾಂತ ಹುಬ್ಬಳ್ಳಿ, ಗಣೇಶ್, ವೀರಯ್ಯ ಮಠಪತಿ, ಪಾರ್ವತಿ ಬೆಳಗಲ್,
ಸುಮಾ ಪಿಡ್ಡನಗೌಡರ, ಕಮಲಾ ಬೆಳಗಲ್, ಸೂರಜ್ ಮಯೇಕರ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಈ ಕಿರುಚಿತ್ರವು ನಮ ಲೋಕ ಯುಟ್ಯೂಬ್ ಚಾನೆರ್ ನಲ್ಲಿ ಶೀಘ್ರದಲ್ಲಿ ರಿಲೀಜ್ ಆಗಲಿದೆ ಎಂದು ತಂಡ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / lalita MP