ಬೆಳಗಟ್ಟಿ ದರ್ಗಾದ ಪೀಠಾದಿಪತಿಗಳ ತಾಯಿ ನಿಧನ
ಇದ್ದಾರೆ
ಬೆಳಗಟ್ಟಿ ದರ್ಗಾದ ಪೀಠಾದಿ ಪತಿಗಳ ತಾಯಿಯ ನಿಧನ


ಬೆಳಗಟ್ಟಿ ದರ್ಗಾದ ಪೀಠಾದಿ ಪತಿಗಳ ತಾಯಿಯ ನಿಧನ


ಬೆಳಗಟ್ಟಿ, 11 ಮೇ (ಹಿ.ಸ.) :

ಆ್ಯಂಕರ್ : ಭಾವೈಕ್ಯತಾ ಕೇಂದ್ರವಾದ ಬೆಳಗಟ್ಟಿಯ ಹಜರತ್ ಸಯ್ಯದ್ ಶಾ ಮುಸ್ತಫಾ ಖಾದ್ರಿ ದರ್ಗಾದ ಪೀಠಾದಿ ಪತಿಗಳಾದ ಶ್ರೀ ಸೈಯದ್ ಶಾ ಮೆಹಬೂಬ್ ಖಾದ್ರಿ ಅವರ ತಾಯಿ ದಿ. ಸೈಯದಾ ಜೈನಬ್ ಬಿ ನಮಾತುಲ್ಲ ಖಾದ್ರಿ (80) ಅವರು ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಇಹ ಲೋಕವನ್ನು ತ್ಯಜಿಸಿದ್ದಾರೆ.

ಮೃತರಿಗೆ ಇಬ್ಬರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳು ಇದ್ದಾರೆ.

ಇವರ ಅಂತ್ಯ ಕ್ರಿಯೆ ಮಂಗಳವಾರ ಮಧ್ಯಾಹ್ನ 1 ಘಂಟೆ ಗೆ ಬೆಳಗಟ್ಟಿಯ ದರ್ಗಾದ ಆವರಣದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande