
ಬಳ್ಳಾರಿ, 11 ಮೇ (ಹಿ.ಸ.) :
ಆ್ಯಂಕರ್ : ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಾಸಾದ್ವಿ ಶಿವಶರಣ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಬಳ್ಳಾರಿ ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಹಾಗೂ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಜಿಲ್ಲಾ ಘಟಕದ ಸಹಯೋಗದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಕಿಷ್ಕಿಂದ ವಿಶ್ವ ವಿದ್ಯಾಲಯದ ಕಲಾಧಿಪತಿ ಡಾ. ಯಶವಂತ ಭೂಪಾಲ್, ಸಮಾಜಸೇವೆಗಾಗಿ ಸಂಗನಕಲ್ಲು ಬಸವರಾಜ್, ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಬಳ್ಳಾರಿ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿರುವ ಡಾ. ಎನ್. ಮಂಜುನಾಥ, ನ್ಯಾಯಾಂಗ ಕ್ಷೇತ್ರದ ಸೇವೆಗಾಗಿ ಮಾಜಿ ಮೇಯರ್ ಪಾರ್ವತಿ ಎಸ್. ಇಂದುಶೇಖರ್, ಸಾವಯವ ಕೃಷಿ ಕ್ಷೇತ್ರದಲ್ಲಿ ಸಿಂಧುವಾಳ ಕೇಶವರಡ್ಡಿ ಮತ್ತು
ಮಾಧ್ಯಮ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾಗಿರುವ ನಡವಿ ವೀರಭದ್ರಗೌಡ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ - ಅಭಿನಂದಿಸಲಾಯಿತು.
ಹೇಮರೆಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾ ಅಧ್ಯಕ್ಷರಾದ ಡಾ. ಎಸ್.ಜೆ.ವಿ. ಮಹಿಪಾಲ್, ಮುಖಂಡರಾದ ಉಡೇದ ಬಸವರಾಜ್, ಸಂಗನಕಲ್ಲು ಹಿಂಮತರಾಜ್, ಜಾನೆಕುಂಟೆ ನೇಪಾಕ್ಷಪ್ಪ, ನೆಲ್ಲುಡಿ ಅಯ್ಯಪ್ಪ, ಸುರೇಖ ಮಲ್ಲನಗೌಡ, ಡಾ. ರೇಣುಕಾ ಮಂಜುನಾಥ, ಡಾ. ಭಾಗ್ಯಲಕ್ಷ್ಮಿ, ಸುಮಂಗಳಮ್ಮ ಬಸವರಾಜ್, ಸುಮಾರೆಡ್ಡಿ, ಡಾ. ಬಸವರಾಜ್ ಗದಗಿನ, ಮಿಂಚೇರಿ ನರೇಂದ್ರಬಾಬು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್