
ಕೊಪ್ಪಳ, 11 ಮೇ (ಹಿ.ಸ.) :
ಆ್ಯಂಕರ್ : ನ್ಯಾಷನಲ್ ಶೋಟೊಖಾನ್ ಕರಾಟೆ ಅಸೋಷಿಯೇಷನ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಮೇ-೦೧ ರಿಂದ ಮೇ-೦೩ ರವರೆಗೆ ತರಬೇತುದಾರರ ತರಬೇತಿ ಮತ್ತು ತೀರ್ಪುಗಾರರ ತಾಂತ್ರಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಗಾರದಲ್ಲಿ ತರಬೇತುದಾರರಿಗೆ ಬ್ಲಾಕ್ ಬೆಲ್ಟ್ ಪರೀಕ್ಷೆ ನಡೆಸಲಾಯಿತು.
ಈ ತರಬೇತಿ ಮತ್ತು ಪರೀಕ್ಷೆಯಲ್ಲಿ ಕೊಪ್ಪಳದಿಂದ ಭಾಗವಹಿಸಿದ್ದ ದೇವಪ್ಪ ಕಲ್ಲನವರ ಬ್ಲಾಕ್ ಬೆಲ್ಟ್ 3 ಡಾನ್, ತಿರುಮಲ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಮತ್ತು ರೇಣುಕಾ ಕಲ್ಲನವರ ಬ್ಲಾಕ್ ಬೆಲ್ಟ್ 1 ಡಾನ್ ಪಡೆದುಕೊಂಡಿದ್ದು ಅವರಿಗೆ NSKAI ಸಂಸ್ಥೆಯ ಮುಖ್ಯಸ್ಥರಾದ ಶಿಹಾನ್ ಸಂಜಯ ಇಂಗೋಲೆ ರವರು ಬ್ಲಾಕ್ ಬೆಲ್ಟ್ ಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ NSKAI ಕರ್ನಾಟಕದ ಅಧ್ಯಕ್ಷರಾದ ಶನ್ಸಾಯ್ ಡಿ, ಬಾಷಾ ಸಾಹೇಬ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್