ಕೋಲಾರ ಟಮಕ ಬಡಾವಣೆಯಲ್ಲಿ ಅದ್ದೂರಿ ಹೂವಿನ ಕರಗ ಮಹೋತ್ಸವ ಆಚರಣೆ
ಕೋಲಾರ ಟಮಕ ಬಡಾವಣೆಯಲ್ಲಿ ಅದ್ದೂರಿ ಹೂವಿನ ಕರಗ ಮಹೋತ್ಸವ ಆಚರಣೆ
ಕೋಲಾರದ ಟಮಕ ಬಡಾವಣೆಯಲ್ಲಿ ಕರಗ ಮಹೋತ್ಸವ ನಡೆಯಿತು.


ಕೋಲಾರ, ೧೧ ಮೇ (ಹಿ.ಸ) :

ಆ್ಯಂಕರ್ : ನಗರದ ಹೊರವಲಯದ ಟಮಕ ದಲ್ಲಿ ರೇಣುಕಾ ಯಲ್ಲಮ್ಮ ದೇವಿಯ ಹೂವಿನ ಕರಗ ಮಹೋತ್ಸವವು ಭಾನುವಾರ ರಾತ್ರಿ ಅಪಾರ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿ0ದ ನೆರವೇರಿತು,

ಕರಗಮಹೋತ್ಸವದಲ್ಲಿ ಕರಗದ ಪೂಜಾರಿ ರೇಣುಕಾ ಯಲ್ಲಮ್ಮ ದೇವಾಲಯದ ಮುಂಭಾಗದ ಆವರಣದಲ್ಲಿ ಮಂಗಳ ವಾದ್ಯ, ಹಲಗೆಗಳ ಲಯಬದ್ದ ತಾಳಕ್ಕೆ ತಕ್ಕಂತೆ ನರ್ತಿಸುವ ಮೂಲಕ ಸೇರಿದ್ದ ಸಾವಿರಾರು ಜನಸ್ತೋಮ ಹರ್ಷದಲ್ಲಿ ತಲ್ಲೀನರಾಗುವಂತೆ ಮಾಡಿದರು

ಹೂವಿನ ಕರಗದೊಂದಿಗೆ ರಕ್ಷಕ ಭಟರಂತೆ ಕತ್ತಿ ಹಿಡಿದು ಸಂಚರಿಸುವ ವೀರಕುಮಾರರು ಕರಗ ನೃತ್ಯದ ವೇದಿಕೆಯ ಮೇಲೆ ಕತ್ತಿ ಝಳುಪಿಸುತ್ತಾ ನೀಡಿದ ಹಲಗು ಸೇವೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿದ ಕರಗಕ್ಕೆ ಜನತೆ ಪೂಜೆ ಸಲ್ಲಿಸಿದರು ದೇವಾಲಯದ ಮುಂಭಾಗ ಅಗ್ನಿಕುಂಡ ಪ್ರವೇಶ ನಡೆಯಿತು ಕರಗ ಮಹೋತ್ಸವದ ಪ್ರಯುಕ್ತವಾಗಿ ಟಮಕ ನಗರದಾದ್ಯಂತ ವಿದ್ಯುತ್ ದೀಪ ಅಲಂಕಾರ ದಿಂದ ಕಂಗೊಳಿಸುತ್ತಿತ್ತು,

ಕರಗ ಮಹೋತ್ಸವದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಡಾಬಾ ಶಂಕರ್, ಪಟೇಲ್ ಶ್ರೀನಿವಾಸ್, ವೆಂಕಟೇಶಪತಿ, ನಾರಾಯಣಸ್ವಾಮಿ, ಶ್ರೀನಿವಾಸ್ (ಸ್ವಾಮೀಜಿ), ಗೋವಿಂದಪ್ಪ, ಅಂಜಿನಪ್ಪ, ಸಂತೋಷ್, ಸತೀಶ್, ವೆಂಕಟರಾಜು, ದೇವರಾಜ್, ಸುಮನ್, ಆನಂದ್, ಅಕ್ಷಯ್, ರವಿ, ಯಲ್ಲಪ್ಪ, ಸಿದ್ದು, ಅಭಿ, ಮನೋಜ್ ಮುಂತಾದವರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande