ಟಣಕನಕಲ್ ಐಟಿಐ ಪ್ರವೇಶ ಅವಧಿ ವಿಸ್ತರಣೆ
ಕೊಪ್ಪಳ, 11 ಮೇ (ಹಿ.ಸ.) : ಆ್ಯಂಕರ್ : ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ 2026–27ನೇ ಸಾಲಿನ ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಅವಧಿಯನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಐಟಿಐ ಪ್ರವೇಶ
ಟಣಕನಕಲ್ ಐಟಿಐ ಪ್ರವೇಶ ಅವಧಿ ವಿಸ್ತರಣೆ


ಕೊಪ್ಪಳ, 11 ಮೇ (ಹಿ.ಸ.) :

ಆ್ಯಂಕರ್ : ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ 2026–27ನೇ ಸಾಲಿನ ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಅವಧಿಯನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ.

ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಐಟಿಐ ಪ್ರವೇಶ ಪ್ರಕ್ರಿಯೆಯು ಪ್ರಾರಂಭವಾಗಿದ್ದು, ಮೇ 8 ವರೆಗೆ ಅರ್ಜಿಗಳನ್ನು ಕರೆಯಲಾಗಿತ್ತು. ಮತ್ತೊಮ್ಮೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮೇ 15ರ ವರೆಗೆ ವಿಸ್ತರಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

ಅರ್ಜಿ ಸಲ್ಲಿಸಲು ಅಭ್ಯರ್ಥಿಯು ದಿನಾಂಕ 1.8.2026 ಕ್ಕೆ ಕನಿಷ್ಠ 14 ವರ್ಷ ಪೂರೈಸಿರಬೇಕು. ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು. ಕೆಲವು ನಿರ್ದಿಷ್ಟ ವೃತ್ತಿಗಳಿಗೆ ಅಂದರೆ ವೆಲ್ಡರ್, ಕಾರ್ಪೆಂಟರ್, ಶೀಟ್ ಮೆಟಲ್ ವರ್ಕರ್ ಇತ್ಯಾದಿ ವೃತ್ತಿಗಳಿಗೆ 8ನೇ ತರಗತಿ ಉತ್ತೀರ್ಣರಾಗಿದ್ದರೂ ಅರ್ಜಿ ಸಲ್ಲಿಸಬಹುದು ಹಾಗೂ ಕನಿಷ್ಠ 5 ವರ್ಷ ಕಡ್ಡಾಯವಾಗಿ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು. ಅಭ್ಯರ್ಥಿಗಳಿಗೆ ನೆರವಾಗಲು ಸಂಸ್ಥೆಯಲ್ಲಿ ಹೆಲ್ಪ್ಡೆಸ್ಕ್ ಅನ್ನು ಪ್ರಾರಂಬಿಸಲಾಗಿದ್ದು, ಇಲ್ಲಿಗೆ ಬಂದು ಮಾಹಿತಿ ಪಡೆಯಬಹುದು.

ಅರ್ಜಿಗಳನ್ನು ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್ಸೈಟ್ www.cite.karnataka.gov.in ಮೂಲಕ ಆನ್ಲೈನ್ನಲ್ಲಿ ಅಥವಾ ಯಾವುದೇ ಕಂಪ್ಯೂಟರ್ ಸೆಂಟರ್ಗಳಲ್ಲಿ ಅಥವಾ ಖುದ್ದಾಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಬಂದು ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9945672606, 9448813422, 9945577155, 9742532353 ಮತ್ತು 8660977220 ಗೆ ಸಂಪರ್ಕಿಸಬಹುದಾಗಿದೆ ಎಂದು ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande