ಕೆಜಿಎಫ್ ಶಾಸಕರ ಜನ್ಮದಿನಾಚರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಕೆಜಿಎಫ್ ಶಾಸಕರ ಜನ್ಮದಿನಾಚರಣೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಕೆಜಿಎಫ್ ಶಾಸಕರಾದ ಡಾ.ಎಂ.ರೂಪಕಲಾ ಶಶಿಧರ್ ತಮ್ಮ ಹುಟ್ಟುಹಬ್ಬದಂದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.


ಕೋಲಾರ ೧೧ ಮೇ (ಹಿ.ಸ) :

ಆ್ಯಂಕರ್ : ಕೆಜಿಎಫ್ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷೆ ಡಾ. ಎಂ. ರೂಪಕಲಾ ಶಶಿಧರ್ ಅವರ ಜನ್ಮ ದಿನಾಚರಣೆಯನ್ನು ಕೆಜಿಎಫ್ ರಾಬರ್ಟ್ಸನ್ಪೇಟೆಯ ನಗರಸಭಾ ಮೈದಾನದಲ್ಲಿ ಅದ್ದೂರಿಯಿಂದ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಈ ಬಾರಿ ಕೆಜಿಎಫ್ ತಾಲ್ಲೂಕೀನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿದ್ದ ಸುಮಾರು ೨೦೬ ಮಂದಿ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ನೀಡಿ, ಗೌರವಿಸಿ, ಶಾಸಕರು ಪ್ರೋತ್ಸಾಹಿಸಿದರು.

ವಾಣಿ ನಿಲಯಂ ಉಚಿತ ವಾಚನಾಲಯ ಮತ್ತು ಗ್ರಂಥಾಲಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಆರ್.ಪ್ರಭುರಾಂ ಅವರ ನೇತೃತ್ವದಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ಆರ್. ಸುಂದರ್, ಪಿ.ಸುದೀಶ್ ಮತ್ತಿತರರು ಶಾಸಕರಾದ ಡಾ. ಎಂ.ರೂಪಕಲಾ ಶಶಿಧರ್ ಅವರಿಗೆ ಜನುಮ ದಿನದ ಪ್ರಯುಕ್ತ ಹೂಗುಚ್ಚ, ನೆನಪಿನ ಕಾಣಿಕೆ, ಶುಭಾಶಯ ಪತ್ರವನ್ನು ನೀಡಿ ಗೌರವಿಸಿದರು.

ಕೆಜಿಎಫ್ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ, ಉತ್ತಮ ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶಾಸಕರಾದ ಡಾ. ಎಂ.ರೂಪಕಲಾ ಶಶಿಧರ್ ಅವರು ವಹಿಸುತ್ತಿರುವ ಕಾಳಜಿ ಮತ್ತು ಶ್ರಮವನ್ನು ಈ ಸಂದರ್ಭದಲ್ಲಿ ಶ್ಲಾಘೀಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande