ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಪಾದಯಾತ್ರೆ ; ರೈತ ಸಂಘಟನೆಗಳ ಎಚ್ಚರಿಕೆ
ಗದಗ, 11 ಮೇ (ಹಿ.ಸ.) : ಆ್ಯಂಕರ್ : ರೈತರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಕೆಂಚಲಾಪುರ ಓಣಿಯ ಮಾಗಡಿ ಇಂಡಸ್ಟ್ರೀಸ್ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ರೈತ ಸಂಘಟನೆಗಳ ಮುಖಂಡರು, ಹೋರಾಟಗಾರರು ಹಾಗೂ ರೈತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ
ಫೋಟೋ


ಗದಗ, 11 ಮೇ (ಹಿ.ಸ.) :

ಆ್ಯಂಕರ್ : ರೈತರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚಿಸಲು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಕೆಂಚಲಾಪುರ ಓಣಿಯ ಮಾಗಡಿ ಇಂಡಸ್ಟ್ರೀಸ್ನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ರೈತ ಸಂಘಟನೆಗಳ ಮುಖಂಡರು, ಹೋರಾಟಗಾರರು ಹಾಗೂ ರೈತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಹೋರಾಟಗಾರ ಹಾಗೂ ವಕೀಲ ರವಿಕಾಂತ ಅಂಗಡಿ ಮತ್ತು ಸಮಗ್ರ ರೈತಪರ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ ಮಾಗಡಿ, ರೈತರಿಗೆ ರಸಗೊಬ್ಬರ ವಿತರಣೆ ವೇಳೆ ಎಫ್ಐಡಿ ಆಧಾರದಲ್ಲಿ “ಒಬ್ಬ ರೈತನಿಗೆ ಒಂದು ಚೀಲ ಗೊಬ್ಬರ” ಎಂಬ ನಿಯಮ ವಿಧಿಸಿರುವುದನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು.

ಮೊದಲಿನಂತೆ ರೈತರಿಂದ ಹೆಬ್ಬೆಟ್ಟು ಪಡೆದು ಗೊಬ್ಬರ ವಿತರಿಸುವ ಪದ್ಧತಿಯನ್ನು ಮುಂದುವರಿಸಬೇಕು. ಒಟಿಪಿ ಮೂಲಕ ಬೀಜ ಹಾಗೂ ರಸಗೊಬ್ಬರ ವಿತರಣೆ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೆಲವು ಗೊಬ್ಬರಗಳ ಕುರಿತು ಮಾತ್ರ ಮಾಹಿತಿ ನೀಡುತ್ತಿದ್ದಾರೆ. ಎಲ್ಲ ರಸಗೊಬ್ಬರಗಳ ಕುರಿತು ಸಮಗ್ರ ಮಾಹಿತಿ ರೈತರಿಗೆ ಒದಗಿಸಬೇಕು ಎಂದು ಹೇಳಿದರು.

ರೈತ ಜಾಗೃತಿ ಕಾರ್ಯಕ್ರಮಗಳಿಗೆ ಕೃಷಿ ಇಲಾಖೆ ಹಣ ಖರ್ಚು ಮಾಡುತ್ತಿರುವಾಗ, ಮುಂಗಾರು ಆರಂಭಕ್ಕೂ ಮುನ್ನ ರೈತರಲ್ಲಿ ಸಮಗ್ರ ಜಾಗೃತಿ ಮೂಡಿಸಬೇಕು. ಸರ್ಕಾರದ ಸೌಲಭ್ಯಗಳು ನೇರವಾಗಿ ರೈತರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಿರಹಟ್ಟಿ ಮತಕ್ಷೇತ್ರದಲ್ಲಿ ಜಿಪಿಎಸ್ ಮಾಹಿತಿ ಮಿಸ್ಮ್ಯಾಚ್ ಆಗಿರುವುದರಿಂದ ಸಾವಿರಾರು ರೈತರಿಗೆ ಬೆಳೆ ವಿಮೆ ಸಿಗುತ್ತಿಲ್ಲ. ಈ ಗೊಂದಲಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೃಷಿಕ ಸಮಾಜ (ನವದೆಹಲಿ) ತಾಲೂಕ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಹಾಗೂ ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿ, ರೈತರಿಗೆ ಇನ್ನೂ ಬೆಳೆ ವಿಮೆ ಹಣ ಬಿಡುಗಡೆಯಾಗಿಲ್ಲ. ತಕ್ಷಣ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಸಮಸ್ಯೆಗಳ ಕುರಿತು ಸರ್ಕಾರ ಸ್ಪಂದಿಸದಿದ್ದರೆ ರೈತ ಹುತಾತ್ಮರ ಗ್ರಾಮ ಗೋವನಾಳದಿಂದ ಲಕ್ಷ್ಮೇಶ್ವರದವರೆಗೆ ಪಾದಯಾತ್ರೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಬಸವರಾಜ ಹಿರೇಮನಿ, ನೀಲಪ್ಪ ಶೇರಸೂರಿ, ಹೊನ್ನಪ್ಪ ವಡ್ಡರ, ಟಾಕಪ್ಪ ಸಾತಪುತೆ, ನಾಮದೇವ ಮಾಂಡ್ರೆ, ಸಂಜೀವ ಹುಡೇದ, ಬಸವರಾಜ ಜಾಲಗಾರ, ಚಂದ್ರು ಮಾಗಡಿ, ಮಂಜುನಾಥ ಮುಳಗುಂದ, ಶಂಕರ ಬ್ಯಾಡಗಿ, ವೀರಣ್ಣ ಕಟಗಿ, ಪವನ ಬಂಕಾಪುರ, ಮುತ್ತಣ್ಣ ನೀರಲಗಿ, ಮಲ್ಲಿಕಾರ್ಜುನ ನೀರಲೋಟ, ರಾಜು ಗುಡಗೇರಿ, ಶಿವಪುತ್ರಪ್ಪ ತಾರಿಕೊಪ್ಪ, ಪದ್ಮನಗೌಡ ಪಾಟೀಲ, ಫಕ್ಕೀರಪ್ಪ ಕುಸಲಾಪುರ, ನಾಗನಗೌಡ ಪಾಟೀಲ, ಮಹಾಂತೇಶ ಉಮಚಗಿ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande