ಧಾರವಾಡ : ಮೇ, ತಿಂಗಳ ಪಡಿತರ ಆಹಾರಧಾನ್ಯ ವಿತರಣೆ
ಧಾರವಾಡ, 11 ಮೇ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪಡಿತರ ಆಹಾರ ಧಾನ್ಯಗಳನ್ನು ಪೂರೈಸುತ್ತಿದ್ದು, ಅದರಂತೆ ಮೇ, 2026 ಹಾಗೂ ಜೂನ, 2026ನೇ ಈ ಎರಡು ಮಾಹೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಅಂತ್ಯೋದಯ ಅನ್ನ ಪಡಿತರ ಚೀಟಿ ಮತ್ತು ಪಿಎಚ್ಎಚ್ (ಬಿಪಿಎಲ್) ಪಡಿತರ ಚ
DC snehal


ಧಾರವಾಡ, 11 ಮೇ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪಡಿತರ ಆಹಾರ ಧಾನ್ಯಗಳನ್ನು ಪೂರೈಸುತ್ತಿದ್ದು, ಅದರಂತೆ ಮೇ, 2026 ಹಾಗೂ ಜೂನ, 2026ನೇ ಈ ಎರಡು ಮಾಹೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಅಂತ್ಯೋದಯ ಅನ್ನ ಪಡಿತರ ಚೀಟಿ ಮತ್ತು ಪಿಎಚ್ಎಚ್ (ಬಿಪಿಎಲ್) ಪಡಿತರ ಚೀಟಿದಾರರಿಗೆ ಆಹಾರಧಾನ್ಯವನ್ನು ವಿತರಣೆ ಮಾಡಲಾಗುತ್ತಿದೆ.

ಅಂತ್ಯೋದಯ ಪಡಿತರ ಚೀಟಿ (ಪ್ರತಿ ಕಾರ್ಡಿಗೆ) 35 ಕೆಜಿ + 35 ಕೆಜಿ = ಒಟ್ಟು 70 ಕೆಜಿ ಅಕ್ಕಿ, ಆದ್ಯತಾ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ರಾಜ್ಯ ಮತ್ತು ಕೇಂದ್ರ ವರ್ಗದಡಿಯ ಪಡಿತರ ಕಾರ್ಡುಗಳಿಗೆ 5 ಕೆಜಿ + 5 ಕೆಜಿ = ಒಟ್ಟು 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತದೆ.

ಮೇ, 2026ನೇ ಮಾಹೆಯಲ್ಲಿ ಕೇಂದ್ರ ವ್ಯಾಪ್ತಿ ಅಂದರೆ ಎನ್ಎಫ್ಎಸ್ಎ ವರ್ಗದಡಿ ಮೇ ಮತ್ತು ಜೂನ-2026 ಎರಡೂ ಮಾಹೆಗಳ ಪಡಿತರ ಆಹಾರಧಾನ್ಯವನ್ನು ವಿತರಿಸಲಾಗುತ್ತಿದ್ದು, ಎಲ್ಲ ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ನ್ಯಾಯ ಬೆಲೆ ಅಂಗಡಿಗಳಲ್ಲಿ ಎರಡೂ ಮಾಹೆಗಳಿಗೆ ಸಂಬಂಧಿಸಿದಂತೆ ಮಾಹೆವಾರು ಪ್ರತ್ಯೇಕವಾಗಿ ಬೆರಳಚ್ಚು ನೀಡಿ ಉಚಿತವಾಗಿ ಪಡಿತರವನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande