
ಕೊಪ್ಪಳ, 11 ಮೇ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆ, ಟಿಬಿಪಿ ಮುನಿರಾಬಾದ್ ವತಿಯಿಂದ 2026-27ನೇ ಸಾಲಿನ ಡಿ.ಇಎಲ್.ಇಡಿ ಕೋರ್ಸುಗಳಿಗೆ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿನ ಡಿ.ಇಎಲ್.ಇಡಿ (ಟಿ.ಸಿ.ಹೆಚ್) ಕೋರ್ಸಿನ ದಾಖಲಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಜೂನ್ 1 ರೊಳಗಾಗಿ ವೆಬ್ಸೈಟ್ www.schooleducation.karnataka.gov.in ಮೂಲಕ ಅರ್ಜಿ ಪಡೆದು, ಪರಿಶಿಷ್ಟ ಜಾತಿ ಅಭ್ಯರ್ಥಿಗಳು 50 ರೂ.ಗಳ ಡಿಡಿಯನ್ನು ಮತ್ತು ಇತರೆ ಅಭ್ಯರ್ಥಿಗಳು 150 ರೂ.ಗಳ ಡಿಡಿಯನ್ನು ಎಸ್.ಬಿ.ಐ ಬ್ಯಾಂಕ್ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ``JOINT DIRECTOR CAC BANGLORE'' ಇವರ ಹೆಸರಲ್ಲಿ ಡಿ.ಡಿ ಪಡೆದು ತಮ್ಮ ವಿದ್ಯಾರ್ಹತೆ ದಾಖಲೆಗಳು & ಆಫ್ಲೈನ್ ಅರ್ಜಿಯೊಂದಿಗೆ ಪ್ರಾಚಾರ್ಯರು ಡಯಟ್ ಮುನಿರಾಬಾದ್ ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ: 9845712728 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆ, ಟಿಬಿಪಿ ಮುನಿರಾಬಾದ್ ಪ್ರಾಶುಂಪಾಲರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್