ಕನ್ನಡ ಭಾಷೆಯನ್ನು ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ
ಕನ್ನಡ ಭಾಷೆಯನ್ನು ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳ ಸೂಚನೆ
ಕನ್ನಡ ಅನುಷ್ಠಾನ ಪ್ರಗತಿಯ ಬಗ್ಗೆ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳ ಸಭೆ ನಡೆಸಿದರು.


ಕೋಲಾರ, ಮೇ ೧೧ (ಹಿ.ಸ) :

ಆ್ಯಂಕರ್ : ಸರ್ಕಾರಿ ಇಲಾಖೆಗಳು, ಸರ್ಕಾರದ ಸೌಮ್ಯದ ಪ್ರಾಧಿಕಾರಗಳು ಹಾಗೂ ಇತರೆಡೆ ಕನ್ನಡ ಭಾಷೆಯನ್ನು ಆಡಳಿತದಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಾದ ಡಾ. ಎಂ.ಆರ್. ರವಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ತಮ್ಮ ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ವ್ಯಾಪಾರ ಮಳಿಗೆಗಳು ಕೈಗಾರಿಕೆಗಳು, ಕಛೇರಿಗಳಲ್ಲಿ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ಇರುವಂತೆ ಸಂಬ0ಧಪಟ್ಟ ಇಲಾಖೆಗಳು ಕ್ರಮ ವಹಿಸಬೇಕು. ಕನ್ನಡ ನಮ್ಮ ಮಾತೃಭಾಷೆ ತಾಯಿಗೆ ಸಮಾನ, ಅದಕ್ಕೆ ಪ್ರಾಶಸ್ತö್ಯ ಕೊಡದಿದ್ದರೆ ಹೆತ್ತ ತಾಯಿಗೆ ಅವಮಾನ ಮಾಡಿದಂತೆ. ಅದ್ದರಿಂದ ಎಲ್ಲರೂ ಈ ಕುರಿತು ಗಮನ ಹರಿಸಿ ಎಂದರಲ್ಲದೆ, ಎಲ್ಲಾ ಇಲಾಖೆಗಳ ವೆಬ್ಸೈಟ್ಗಳು, ಟೆಂಡರ್ ಪ್ರಕ್ರಿಯೆಗಳು ಮತ್ತು ಅರ್ಜಿ ನಮೂನೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದರು.

ಸಭೆಯಲ್ಲಿ ಕನ್ನಡ ಅನುಷ್ಠಾನದ ಸಮಿತಿ ಸದಸ್ಯರಾದ ಉಪನ್ಯಾಸಕ ಜಿ.ಜಿ. ನಾಗರಾಜ ಅವರು ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಶಿಕ್ಷಣ, ಮುಂತಾದ ಪೂರಕ ಇಲಾಖೆಯೊಂದಿಗೆ ಸಭೆ ಕರೆದು ಈ ಕುರಿತು ವಿಸ್ಮೃತವಾಗಿ ಚರ್ಚಿಸಲಾಗಿವುದೆಂದರು.

ಬೆಮೆಲ್ ಹಾಗೂ ಕೆಲವು ರಾಷ್ಟಿçÃಕೃತ ಬ್ಯಾಂಕ್ಗಳಲ್ಲಿ ಕನ್ನಡ ವ್ಯವಹಾರದ ಭಾಷೆಯಾಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಕನ್ನಡ ಭಾಷೆಯನ್ನು ಇತರೆ ಭಾಷಿಗರೂ ಪ್ರೀತಿಯಿಂದ ಸ್ವೀಕರಿಸಿ ಕಲಿತದ್ದೇ ಆದರೆ ಸಮಸ್ಯೆ ಪರಿಹಾರಗೊಳ್ಳುವುದು ಎಂದರು.

ಸಭೆಯಲ್ಲಿ ಅಪರ ಪೋಲಿಸ್ ವರಿಷ್ಠಾಧಿಕಾರಿಗಳಾದ ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವಿಜಯಲಕ್ಷಿö್ಮÃ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande