
ರಾಯಚೂರು, 11 ಮೇ (ಹಿ.ಸ.) :
ಆ್ಯಂಕರ್ : ರಾಯಚೂರು ತಾಲೂಕಿನ ಯರಮರಸ್ ಡಯಟ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ 2026-27ನೇ ಸಾಲಿನ ಡಿ.ಇಎಲ್.ಇಡಿ ಹಾಗೂ ಡಿ.ಪಿ.ಇಡಿ ಕೋರ್ಸುಗಳಿಗೆ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವ್ಯಾಸಂಗಕ್ಕಾಗಿ ದಾಖಲಾತಿ ಬಯಸುವ ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್ ವಿಳಾಸ: www.schooleducation.kar.nic.in ಅಂತರ್ಜಾಲದ ಮುಖಪುಟ ನಲ್ಲಿ ಪ್ರಕಟವಾಗುವ Application for Admission to D.el.Ed/Dped Course 2026-27 ಎಂಬುದನ್ನು ಕ್ಲೀಕ್ ಮಾಡಿದನಂತರ ಮೇಲೆ ಪ್ರಕಟವಾಗುವ ಅರ್ಜಿಯನ್ನು ಮುದ್ರಣ ಮಾಡಿಕೊಂಡು ಅರ್ಜಿಯನ್ನು ಭರ್ತಿಮಾಡಿ ಹಾಗೂ ಬ್ಯಾಂಕ್ ಡಿ.ಡಿಯೊಂದಿಗೆ ಡಯಟ್ ಯರಮರಸ್ ಕಚೇರಿಗೆ ದಿನಾಂಕ: 01-06-2026ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಸಿಂಧನೂರುನಲ್ಲಿ ಕಲಿಕಾ ಸೌಲಭ್ಯಗಳಿರುತ್ತವೆ. ಆಸಕ್ತಿ ಅಭ್ಯರ್ಥಿಗಳು ಆದ್ಯತೆಯ ಮೇರೆಗೆ ಈ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಯರಮರಸ್ ಡಯಟ್ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕರು (ಅಭಿವೃಧಿ) ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್