ಓಪನ್” ಐಟಿಎಫ್ ಡಬ್ಲ್ಯು 35 ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿ ಯಶಸ್ವಿ
ತುಮಕೂರು, 10 ಮೇ (ಹಿ.ಸ.) : ಆ್ಯಂಕರ್ : ತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಒಪನ್ ಟೆನಿಸ್ ಕ್ರೀಡಾಕೂಟ “ತುಮಕೂರು ಓಪನ್” ಐಟಿಎಫ್ ಡಬ್ಲ್ಯು 35 ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಲಿಥುವೇನಿಯಾದ ಜಸ್ಟಿನಾ ಮಿಕುಲ್ಸ್ಕಿಟೆ ಚಾಂಪಿಯನ
Prize distribution


ತುಮಕೂರು, 10 ಮೇ (ಹಿ.ಸ.) :

ಆ್ಯಂಕರ್ : ತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಒಪನ್ ಟೆನಿಸ್ ಕ್ರೀಡಾಕೂಟ “ತುಮಕೂರು ಓಪನ್” ಐಟಿಎಫ್ ಡಬ್ಲ್ಯು 35 ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಲಿಥುವೇನಿಯಾದ ಜಸ್ಟಿನಾ ಮಿಕುಲ್ಸ್ಕಿಟೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫೈನಲ್ನಲ್ಲಿ ಅವರು ಶ್ರೇಷ್ಠ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದರು.

ಪೋಲೆಂಡ್ನ ಜುಝಾನ್ನಾ ಪಾವ್ಲಿಕೋವ್ಸ್ಕಾ ರನ್ನರ್ ಅಪ್ ಆಗಿ ಸಾಧನೆ ಮಾಡಿದ್ದಾರೆ.

ವಿಜೇತ ಮತ್ತು ರನ್ನರ್ ಅಪ್ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಇಬ್ಬರನ್ನೂ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಕರಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವುದು ಹಾಗೂ ತುಮಕೂರನ್ನು ಕ್ರೀಡಾ ಕೇಂದ್ರವನ್ನಾಗಿ ರೂಪಿಸುವುದು ಸರ್ಕಾರದ ಪ್ರಮುಖ ದೃಷ್ಟಿಕೋನವಾಗಿದೆ ಎಂದು ಹೇಳಿದರು.

ಮಾದಕ ದ್ರವ್ಯ ಮುಕ್ತ ರಾಜ್ಯ ನಿರ್ಮಾಣವೂ ಸರ್ಕಾರದ ಗುರಿಯಾಗಿದ್ದು, ಯುವಕರನ್ನು ಸಕಾರಾತ್ಮಕ ಚಟುವಟಿಕೆಗಳತ್ತ ತೊಡಗಿಸುವ ಅತ್ಯುತ್ತಮ ಮಾರ್ಗ ಕ್ರೀಡೆ ಎಂದು ಅವರು ಅಭಿಪ್ರಾಯಪಟ್ಟರು. ಕ್ರೀಡಾಪಟುಗಳಿಗೆ ಅಗತ್ಯ ಮೂಲಸೌಕರ್ಯ ಮತ್ತು ಅವಕಾಶಗಳನ್ನು ಹೆಚ್ಚಿಸುವ ಮೂಲಕ ತುಮಕೂರನ್ನು ಕ್ರೀಡಾ ನಗರವನ್ನಾಗಿ ರೂಪಿಸುವ ಯೋಜನೆಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ನ ಗೌರವ ಜಂಟಿ ಕಾರ್ಯದರ್ಶಿ ಸುನಿಲ್ ಯಜಮಾನ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ತುಮಕೂರು ಜಿಲ್ಲಾ ಟೆನಿಸ್ ಕ್ರೀಡಾಂಗಣದ ಅಧ್ಯಕ್ಷ ಹಾಗೂ ಪಂದ್ಯಾವಳಿ ನಿರ್ದೇಶಕ ಜಿ.ಆರ್. ಅಮರನಾಥ್ ಹಾಗೂ ಐಟಿಎಫ್ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande