



ರಾಯಚೂರು, 10 ಮೇ (ಹಿ.ಸ.) :
ಆ್ಯಂಕರ್ : ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನುಕ ಪ್ರತಿಯೊಬ್ಬರೂ ತಿಳಿದುಕೊಳ್ಳುವುದರ ಜೊತೆಗೆ ಅವರ ಹಾದಿಯಲ್ಲಿ ನಾವೆಲ್ಲರು ನಡೆಯಬೇಕಾಗಿದೆ. ವಾಲ್ಮೀಕಿ ಸಮಾಜ ರಾಜ್ಯದಲ್ಲಿ ಶಿಕ್ಷಣದಿಂದ ಹಿಂದೆ ಉಳಿದಿದೆ ಎಂಬ ಅಂಶ ಬೆಳಕಿಗೆ ಬಂದಿದೆ ಅದನ್ನು ಹೋಗಲಾಡಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಭೋಸರಾಜು ಹೇಳಿದ್ದಾರೆ.
ಸಿರವಾರ ತಾಲೂಕಿನ ಬಲ್ಲಟಿಗಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಕಂಚಿನ ಮೂರ್ತಿಯನ್ನು
ಸಚಿವ ಎನ್ಎಸ್ ಬೋಸರಾಜು, ತೆಲಂಗಾಣ ಸಚಿವ ವಾಟಕಿ ಶ್ರೀಹರಿ, ಸಂಸದ ಕುಮಾರ ನಾಯಕ, ಶಾಸಕ ಹಂಪಯ್ಯ ನಾಯಕ ಸೇರಿ ಅನೇಕರು ಭಾಗಿಯಾಗಿ ಉದ್ಘಾಟಿಸಿ ಮಾತನಾಡಿದರು.
ಮಾನ್ವಿ-ಸಿರವಾರ ತಾಲ್ಲೂಕಿನ ವಾಲ್ಮೀಕಿ ಭವನಕ್ಕೆ ಹೆಚ್ಚಿನ ಅನುದಾನ ನೀಡುವುದರ ಜೊತೆಗೆ ಎಲ್ಲಾ ಸಮಾಜದ ಜನಾಂಗಕ್ಕೆ ಭವನಗಳನ್ನು ಹಾಗೂ ವಿವಿಧ ಕಾರ್ಯಗಳನ್ನು ಮಾಡಲು ಅನುದಾನ ನೀಡಲಾಗಿದೆ ಎಂದರು.
ನಂತರ ತೆಲಂಗಾಣ ಕಾರ್ಮಿಕ ಸಚಿವರಾದ ಶ್ರೀಹರಿ ಮಾತನಾಡಿದರು. ಸಂಸದ ಜಿ.ಕುಮಾರ ನಾಯಕ ಮಾತನಾಡಿ ಗುರು ಇರಬೇಕು, ಜೀವನದಲ್ಲಿ ಗುರಿ ಇರಬೇಕು, ಅಭಿವೃದ್ಧಿ ಹೊಂದಲು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಮಾನ್ವಿ ಶಾಸಕ ಹಂಪಯ್ಯ ನಾಯಕ ಪ್ರಾಸ್ತಾವಿಕ ನುಡಿಯಲ್ಲಿ ವಾಲ್ಮೀಕಿ ಸಮಾಜ ದೊಡ್ಡದು, ಶಿಕ್ಷಣದಲ್ಲಿ ಹಿಂದೆ ಉಳಿದಿದೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಾನಿಧ್ಯವಹಿಸಿದ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಶ್ನನಂದಾ ಸ್ವಾಮಿಗಳು ಮಾತನಾಡಿ, ಶರಣರನ್ನು ಜಾತಿ ಪ್ರೇಮಕ್ಕೆ ಸೀಮಿತವಾಗಿಸಿದ್ದವೇ ಇದು ಸರಯಲ್ಲ, ಅವರ ಆದರ್ಶಗಳನ್ನು ನೋಡಬೇಕು ಎಂದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್