
ಗದಗ, 10 ಮೇ (ಹಿ.ಸ.) :
ಆ್ಯಂಕರ್ : ಅಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗ ವರ್ಧಕ ಟ್ರಸ್ಟ್ ವತಿಯಿಂದ 2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಗದಗ ಜಿಲ್ಲಾ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಲದೇ, 2025-26ನೇ ಸಾಲಿನಲ್ಲಿ ನಿವೃತ್ತರಾಗಿರುವ ಗದಗ ಜಿಲ್ಲಾ ಗಾಣಿಗ ಸಮಾಜದ ನಿವೃತ್ತ ಸರಕಾರಿ ನೌಕರರಿಗೆ ಸನ್ಮಾನಿಸಿ, ಗೌರವಿಸಲಾಗುತ್ತಿದೆ. ಆದ್ದರಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಹ ವಿದ್ಯಾರ್ಥಿಗಳು 01-06-2026ರೊಳಗಾಗಿ ಅಂಕಪಟ್ಟಿಯ ನಕಲು ಪತ್ರಿ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೊದೊಂದಿಗೆ ಮಾಹಿತಿ ನೀಡಲು ಸೂಚಿಸಿದೆ.
ಅರ್ಹ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರು ವಿವೇಕಾನಂದ ನಗರದ ಗಾಣಿಗ ಭವನ ಕಾರ್ಯಾಲಯ, ಕಾಟನ್ ಮಾರ್ಕೆಟ್ ರಸ್ತೆಯ ಲಕ್ಕುಂಡಿ ಸ್ಟೀಲ್ಸ್ ಹಾಗೂ ಎಪಿಎಂಸಿ ಯಾರ್ಡ್ನ ಎಂ.ಬಿ. ಬಡ್ನಿ & ಕಂ. ಹಾಗೂ ಮೊಬೈಲ್ ಸಂಖ್ಯೆ 94481-42509, 99450-37111, 77958-26957, 89705-92837 ಸಂಪರ್ಕಿಸಬಹುದು ಎಂದು ಖಿಲ ಭಾರತ ಗಾಣಿಗ ವಿದ್ಯಾ ಹಾಗೂ ಉದ್ಯೋಗ ವರ್ಧಕ ಟ್ರಸ್ಟ್ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP