
ನವದೆಹಲಿ, 09 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಿ.ಆರ್.ಪಿ.ಎಫ್ ಶೌರ್ಯ ದಿನದ ಅಂಗವಾಗಿ ಶೌರ್ಯ ಮತ್ತು ತ್ಯಾಗದ ಪ್ರತೀಕವಾದ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, 1965ರಲ್ಲಿ ಇದೇ ದಿನ, ರಣ್ ಆಫ್ ಕಚ್ನ ಸರ್ದಾರ್ ಪೋಸ್ಟ್ನಲ್ಲಿ ಸಿ.ಆರ್.ಪಿ.ಎಫ್ ಯೋಧರು ಅಪ್ರತಿಮ ಧೈರ್ಯ ಪ್ರದರ್ಶಿಸಿ, ಶತ್ರುಗಳ ದಾಳಿಯನ್ನು ತಡೆದು ನಿಂತರು. ತಮ್ಮ ಪ್ರಾಣಪಣವಾಗಿ ಹೋರಾಡಿದ ಅವರು ಭಾರತದ ರಕ್ಷಣಾ ಇತಿಹಾಸದಲ್ಲಿ ಅಜರಾಮರವಾದ ಅಧ್ಯಾಯವನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ರಾಷ್ಟ್ರದ ಗೌರವ ಮತ್ತು ಭದ್ರತೆಗಾಗಿ ತಮ್ಮ ಜೀವವನ್ನೇ ಅರ್ಪಿಸಿದ ಹುತಾತ್ಮರಿಗೆ ಅಮಿತ್ ಶಾ ಅವರು ಹೃತ್ಪೂರ್ವಕ ನಮನಗಳನ್ನು ಸಲ್ಲಿಸಿ, ಅವರ ತ್ಯಾಗ ಮತ್ತು ಶೌರ್ಯ ಸದಾ ಪ್ರೇರಣೆಯಾಗಿರುತ್ತದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa